ಮಹಿಳಾ ಸಬಲೀಕರಣ ಕುರಿತ ಕಾರ್ಯಕ್ರಮ
Update: 2017-09-22 20:43 IST
ಉಡುಪಿ, ಸೆ.22: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಮಹಿಳಾ ಘಟಕದ ವತಿಯಿಂದ ಮಹಿಳಾ ಸಬಲೀಕರಣ ಕುರಿತ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಸುಮಿತ್ರ ಕಾರುಂಜೆ, ಹದಿಹರೆಯದ ಸಮಸ್ಯೆಗಳು, ದೈಹಿಕ ಬದಲಾವಣೆ, ದುಷ್ಚಟಗಳ ಬಗೆಗಿನ ಉತ್ಸುಕತೆ, ಇಂಟರ್ನೆಟ್ ಚಟ, ಆತ್ಮವಿಶ್ವಾಸ ಹಾಗೂ ಉತತಮ ಗುರಿ ನಿರ್ಧಾರಗಳ ಬಗ್ಗೆ ಮಾತನಾಡಿದರು.
ಮಹಿಳಾ ಘಟಕದ ಸಂಚಾಲಕಿ ಕ್ಲಾರಾ ಮೆನೆಜಸ್, ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಸಿಂಧುಜ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮೆಲಿಷಾ ಸ್ವಾಗತಿಸಿ ದರು. ಭ್ರಿಂದ ಕಾರ್ಯಕ್ರಮ ನಿರೂಪಿಸಿದರು.