×
Ad

ಇಂಜಿನಿಯರ್ ವಿದ್ಯಾರ್ಥಿಗಳಿಗೆ ತಾಂತ್ರಿಕ ಕಾರ್ಯಾಗಾರ

Update: 2017-09-22 20:45 IST

ಶಿರ್ವ, ಸೆ.22: ಬಂಟಕಲ್ ಶ್ರೀಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ ಇಂಜಿನಿಯರಿಂಗ್ ಕಾಲೇಜಿನ ಐ.ಎಸ್.ಟಿ.ಇ. ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಡಿಸೈನ್ ಫಾರ್ ಮ್ಯಾನು ಫ್ಯಾಕ್ಚರ್ ಆ್ಯಂಡ್ ಅಸೆಂಬ್ಲಿ ಎಂಬ ತಾಂತ್ರಿಕ ಕಾರ್ಯಾಗಾರವನ್ನು ಇತ್ತೀಚೆಗೆ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಡಿಎಫ್‌ಎಂನ ಬಗ್ಗೆ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಸುದರ್ಶನ್ ರಾವ್ ಪರಿಚಯ ಮಾಡಿಕೊಟ್ಟರು. ವಿಭಾಗದ ಪ್ರಾಧ್ಯಾಪಕ ಆನಂದ್ ಬಿ.ಹೆಗ್ಡೆ, ಆದಿತ್ಯ ಕುಡ್ವ ಎಸ್., ಸುಧೀರ್, ಕಿರಣ್ ಎನ್. ಭಟ್ ಡಿ.ಎಫ್.ಎಂ.ನ ವಿವಿಧ ವಿಭಾಗಗಳ ಮಹತ್ವವನ್ನು ವಿಶ್ಲೇಷಿಸಿದರು.ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ. ತಿರುಮಲೇಶ್ವರ ಭಟ್ ಶುಭಕೋರಿ ದರು. ಸೆಮಿನಾರಿನ ಆಯೋಜಕ ಪವನ್ ಕುಮಾರ್, ವಿ.ವಿಜೇಂದ್ರ ಭಟ್ ಮತ್ತು ನಾರಾಯಣ್ ಎನ್.ನಾಯಕ್ ಉಪಸ್ಥಿತರಿದ್ದರು.

ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಗೌರವ್ ಕೆ.ಜಿ. ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಇಂಜಿನಿಯರಿಂಗ್‌ಕಾಲೇಜುಗಳ ಸುಮಾರು 131 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News