ವಿಷದ ಹಾವು ಕಡಿತ: ಮಹಿಳೆ ಮೃತ್ಯು
Update: 2017-09-22 20:59 IST
ಬೈಂದೂರು, ಸೆ.22: ವಿಷದ ಹಾವು ಕಡಿತಕ್ಕೆ ಒಳಗಾದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸೆ.21ರಂದು ಸಂಜೆ ಕೆರ್ಗಾಲಾ ಗ್ರಾಮದ ಚೆರುಮಕ್ಕಿ ಎಂಬಲ್ಲಿ ನಡೆದಿದೆ.
ಮೃತರನ್ನು ಚೆರುಮಕ್ಕಿ ನಿವಾಸಿ ದುರ್ಗಾ ದೇವಾಡಿಗ ಎಂಬವರ ಪತ್ನಿ ಗಂಗೆ (55) ಎಂದು ಗುರುತಿಸಲಾಗಿದೆ.
ಇವರು ಗದ್ದೆಯಲ್ಲಿ ಕಳೆ ಕೀಳುತ್ತಿರುವಾಗ ಕೈಗೆ ಯಾವುದೋ ವಿಷಪೂರಿತ ಹಾವೊಂದು ಕಚ್ಚಿತ್ತೆನ್ನಲಾಗಿದೆ. ಇದರಿಂದ ಅಸ್ವಸ್ಥಗೊಂಡ ಅವರನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.