×
Ad

ದಕ್ಷಿಣ ವಲಯ ಜ್ಯೂನಿಯರ್ ಅಥ್ಲೆಟಿಕ್ಸ್: ಆಳ್ವಾಸ್ ಕ್ರೀಡಾಪಟುಗಳಿಂದ ಸಾಧನೆ

Update: 2017-09-22 22:22 IST

ಮೂಡುಬಿದಿರೆ, ಸೆ. 22: ತಿರುವನಂತಪುರಂ ಚಂದ್ರಶೇಖರ್ ನಾಯರ್ ಸ್ಟೇಡಿಯಂನಲ್ಲಿ ನಡೆದ 29ನೇ ಜ್ಯೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‍ ಶಿಪ್‍ನಲ್ಲಿ ಆಳ್ವಾಸ್ ಒಟ್ಟು 39 ಪದಕಗಳನ್ನು ಗೆದ್ದು, ಸಾಧನೆ ಮಾಡಿದೆ. 

ಆಳ್ವಾಸ್ ಸಂಸ್ಥೆಯು 6 ಚಿನ್ನದ ಪದಕ , 18 ಬೆಳ್ಳಿ ಹಾಗೂ 15 ಕಂಚಿನ ಪದಕಗಳನ್ನು ಪಡೆದಿದೆ. 18 ವರ್ಷದೊಳಗಿನ ಬಾಲಕರ ವಿಭಾಗದ ಜವಲಿನ್ ತ್ರೋನಲ್ಲಿ ಆಳ್ವಾಸ್ ಮನು ಡಿ.ಪಿ ನೂತನ ಕೂಟ ದಾಖಲೆಯನ್ನು ಮಾಡಿದ್ದಾರೆ.

ಕ್ರೀಡಾಪಟುಗಳ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News