ಮಹಿಳೆಯರಿಗಾಗಿ ಉಚಿತ ತರಬೇತಿ

Update: 2017-09-22 17:24 GMT

ಉಡುಪಿ, ಸೆ.22: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಮಹಿಳಾ ತರಬೇತಿ ಯೋಜನೆಯಡಿ 2017-18ನೇ ಸಾಲಿನಲ್ಲಿ ಮಹಿಳೆಯರಿಗೆ ಬ್ಯೂಟೀಶಿಯನ್, ಟೈಲರಿಂಗ್, ಕಂಪ್ಯೂಟರ್ ಉಚಿತ ತರಬೇತಿಗಳನ್ನು ಮಣಿಪಾಲ ಸರ್ಡ್ ಸಂಸ್ಥೆ ಹಾಗೂ ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯಲ್ಲಿ ಹಮ್ಮಿ ಕೊಳ್ಳಲಾಗಿದೆ.

ತರಬೇತಿ ಹೊಂದಲು 18ರಿಂದ 35 ವರ್ಷಗಳ ವಯೋಗುಂಪಿನ ಶಾಲೆ ಬಿಟ್ಟವರು/10ನೆ ತರಗತಿ/12ನೆ ತರಗತಿ ಉತ್ತೀರ್ಣರಾದ ಯುವತಿಯರಿಗೆ/ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು. ನಂತರದ ಆದ್ಯತೆ ಪದವೀಧರರಿಗೆ ನೀಡಲಾಗುವುದು.

ಅರ್ಜಿಯನ್ನು ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಉಡುಪಿ/ಕುಂದಾಪುರ/ಕಾರ್ಕಳ/ಬ್ರಹ್ಮಾವರ ಅಥವಾ ಉಪನಿರ್ದೇಶ ಕರ ಕಛೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಿ ಬ್ಲಾಕ್, 1ನೇ ಮಹಡಿ ರಜತಾದ್ರಿ, ಮಣಿಪಾಲ ಇಲ್ಲಿ ಪಡೆದು ಅ.3ರ ಒಳಗೆ ಸಲ್ಲಿಸಬೇಕು.

ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರ, ಕುಟುಂಬದ ವಾರ್ಷಿಕ ಆದಾಯ ಪತ್ರ, ಪಡಿತರ ಚೀಟಿ/ಮತದಾರರ ಗುರುತಿನ ಚೀಟಿ, 3 ಭಾವಚಿತ್ರಗಳು, ಆಧಾರ್ ಕಾರ್ಡ್, ಎಸೆಸೆಲ್ಸಿ/ಪಿಯುಸಿ ಅಂಕ ಪಟ್ಟಿ ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0820-2574972ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News