ತಂಬಾಕು ಉತ್ಪನ್ನ ಮಾರಾಟ: 34 ಪ್ರಕರಣ ದಾಖಲು

Update: 2017-09-22 17:26 GMT

ಉಡುಪಿ, ಸೆ.22: ಉಡುಪಿ ಜಿಲ್ಲೆಯಲ್ಲಿ ಕೊಟ್ಪಾ ಕಾಯ್ದೆಯನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳವು ಕುಂದಾಪುರ ತಾಲೂಕಿನ ಸಿದ್ದಾಪುರ ಪೇಟೆ ಪ್ರದೇಶಗಳಲ್ಲಿ ವಿವಿಧ ತಂಬಾಕು ಮಾರಾಟದ ಅಂಗಡಿ, ಹೊಟೇಲ್ ಮತ್ತು ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ದಾಳಿ ನಡೆಸಿ ಸೆಕ್ಷನ್ 4, 6(ಎ) ಮತ್ತು 6(ಬಿ) ಅಡಿಯಲ್ಲಿ 34 ಪ್ರಕರಣ ಗಳನ್ನು ದಾಖಲಿಸಿ 6100ರೂ. ದಂಡ ವಸೂಲಿ ಮಾಡಿದ್ದು, ಅದರಂತೆ ಸೆಕ್ಷನ್ 4, 6(ಎ) ಮತ್ತು 6(ಬಿ) ನಾಮಫಲಕಗಳನ್ನು ವಿತರಿಸಲಾಯಿತು.

ಈ ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಾದ ಡಾ.ವಾಸುದೇವ, ತಾಲೂಕು ಆರೋಗ್ಯಾಧಿಕಾರಿ ಪ್ರಭಾರ ಡಾ.ಉಮೇಶ್ ನಾಯಕ್, ಜಿಲ್ಲಾ ಎನ್.ಸಿ.ಡಿ. ಘಟಕದ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಡಾ.ಆದರ್ಶ್ ವರ್ಗೀಸ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಆನಂದ ಗೌಡ, ಹಿರಿಯ ಆರೋಗ್ಯ ಸಹಾಯಕ ಸದಾನಂದ ಹೆಬ್ಬಾರ್, ಶಿಕ್ಷಣ ಇಲಾಖೆಯ ದತ್ತಾತ್ರೇಯ ನಾಯಕ್, ಕಾರ್ಮಿಕ ಇಲಾಖೆಯ ಡಿ.ಎಸ್.ಸತ್ಯನಾರಾಯಣ, ಕಿರಿಯ ಆರೋಗ್ಯ ಸಹಾಯಕ ಶಿವಕುಮಾರ್, ಶಂಕರನಾರಾಯಣ ಗ್ರಾಮೀಣ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷರು ಶುಭಕರ್, ಪೊಲೀಸ್ ಕಾನ್‌ಸ್ಟೇಬಲ್ ಅರುಣ್ ಕುಮಾರ್ ಶೆಟ್ಟಿ ಮತ್ತು ವಾಹನ ಚಾಲಕರಾದ ಶುಭಾಷ್ ಮತ್ತು ಸತೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News