ಘನ, ದ್ರವ ಸಂಪನ್ಮೂಲ ನಿರ್ವಹಣೆ ಕಾರ್ಯಾಗಾರ

Update: 2017-09-22 17:30 GMT

ಸಾಲಿಗ್ರಾಮ, ಸೆ.22: ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಯೋಜನೆಯ ಕಾರ್ಯಾಗಾರವನ್ನು ಪ.ಪಂ ಅಧ್ಯಕ್ಷೆ ರತ್ನಾ ನಾಗರಾಜ ಗಾಣಿಗ ಇತ್ತೀಚೆಗೆ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಇಂದು ಸ್ಥಳೀಯ ಸಂಸ್ಥೆಗಳಿಗೆ ಕಸದ ವಿಲೇ ವಾರಿ ದೊಡ್ಡ ಸಮಸ್ಯೆಯಾಗಿದ್ದು, ಈ ಹಿಂದೆ ತೆಗೆದು ಕೊಂಡ ಉಪಕ್ರಮಗಳೆಲ್ಲ ತಾರ್ಕಿಕ ಅಂತ್ಯಕ್ಕೆ ಬಂದಿಲ್ಲ. ಮೂಲದಲ್ಲೆ ಕಸವನ್ನು ಬೇರ್ಪಡಿಸಿ ಕಸಕ್ಕೆ ಮುಕಿ್ತ ಹಾಡಬೇಕಾಗಿದೆ ಎಂದು ಹೇಳಿದರು.
ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಇಂಡಿಯನ್ ಗ್ರೀನ್ ಸರ್ವೀಸ್‌ನ ಯೋಜನಾ ನಿರ್ದೇಶಕ ವೆಲ್ಲೂರು ಶ್ರೀನಿವಾಸನ್, ಘನ ದ್ರವ ಸಂಪನ್ಮೂಲದ ಅಗತ್ಯತೆ, ಬೇರ್ಪಡಿಸುವಿಕೆ ಹಾಗೂ ಅದನ್ನು ಆರ್ಥಿಕ ಮೂಲವನ್ನಾಗಿ ಮಾಡುವ ಬಗ್ಗೆ ಪ್ರಾತ್ಯಕ್ಷಿತೆಯನ್ನು ನಡೆಸಿಕೊಟ್ಟರು. ಮಣೂರು ಪಡುಕೆರೆ ಸರಕಾರಿ ಪ್ರೌಢಶಾಲೆಯ ಅಧ್ಯಾಪಕ ಜಿ.ಶ್ರೀಧರ್ ಶಾಸ್ತ್ರಿ ಕನ್ನಡ ಅನುವಾದ ಗೈದರು.

ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಆರ್.ಶ್ರೀಪಾದ್ ಪುರೋಹಿತ್, ಪ.ಪಂ ಸದಸ್ಯರುಗಳು, ಮಾಜಿ ಅಧ್ಯಕ್ಷರುಗಳು, ನಾಮ ನಿರ್ದೇಶನ ಸದಸ್ಯರು ಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಚಂದ್ರಶೇಖರ ಸೋಮಯಾಜಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News