ಮ್ಯಾನ್ಮಾರ್ ದೇಶ “ಜನಾಂಗೀಯ ಹತ್ಯೆಯ ಅಪರಾಧಿ”

Update: 2017-09-22 17:49 GMT

ಕೌಲಾಲಂಪುರ (ಮಲೇಶ್ಯ), ಸೆ. 22: ಮಲೇಶ್ಯದ ರಾಜಧಾನಿ ಕೌಲಾಲಂಪುರದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಜನತಾ ನ್ಯಾಯಾಲಯವೊಂದು, ‘ಮ್ಯಾನ್ಮಾರ್’, ರೊಹಿಂಗ್ಯಾ ಮುಸ್ಲಿಮರ ಜನಾಂಗೀಯ ಹತ್ಯೆ ನಡೆಸಿದ ಅಪರಾಧಿ ಎಂದು ತೀರ್ಪು ನೀಡಿದೆ. ಹಾಗೂ ಮ್ಯಾನ್ಮಾರ್ ಸೇನೆ ನಡೆಸಿರುವ ಕೃತ್ಯಗಳನ್ನು ಯುದ್ಧಾಪರಾಧವೆಂಬುದಾಗಿ ಪರಿಗಣಿಸಿ ವಿಚಾರಣೆಯಾಗಬೇಕಾಗಿದೆ ಎಂದಿದೆ.

ರೊಹಿಂಗ್ಯಾ ಮುಸ್ಲಿಮರ ಜನಾಂಗೀಯ ಹತ್ಯಾಕಾಂಡವನ್ನು ಮ್ಯಾನ್ಮಾರ್ ಸೇನೆಯು ತನ್ನ ‘ಅಧಿಕೃತ ಕರ್ತವ್ಯ’ವೆಂಬಂತೆ ಮಾಡುತ್ತಿದೆ ಖಾಯಂ ಜನತಾ ನ್ಯಾಯಾಲಯ (ಪಿಪಿಟಿ)ದ ಏಳು ಸದಸ್ಯರ ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News