ಪುತ್ತೂರು ದಸರಾ ಮಹೋತ್ಸವ: ಸಹಸ್ರನಾಳೀಕೇರ ಗಣಯಾಗ, ಶ್ರೀಚಕ್ರ ಪೂಜೆ

Update: 2017-09-22 17:52 GMT

ಪುತ್ತೂರು, ಸೆ. 22: ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ಕಳೆದ 14 ವರ್ಷಗಳಿಂದ ಗಣಪತಿ, ಶಾರದೆ ಸಹಿತ ನವದುರ್ಗೆಯರ ಆರಾಧನೆ ಪುತ್ತೂರು ದಸರಾ ಮಹೋತ್ಸವ ಸಮಿತಿ ವತಿಯಿಂದ ನಡೆದು ಬಂದಿದ್ದು, ಪ್ರಸ್ತುತ 15ನೇ ವರ್ಷದ ಕಾರ್ಯಕ್ರಮದ ಅಂಗವಾಗಿ ಸೆ.24ರಂದು 1008 ತೆಂಗಿನ ಕಾಯಿಗಳ ಸಾರ್ವಜನಿಕ ಸಹಸ್ರನಾಳೀಕೇರ ಗಣಯಾಗ ಮತ್ತು ಸಂಜೆ ದೇವಿಯ ಪ್ರಕೃತಿ ಆರಾಧನೆಯಾದ ಶ್ರೀಚಕ್ರ ಪೂಜೆ ನಡೆಯಲಿದೆ.

1008 ತೆಂಗಿನ ಕಾಯಿ ಗಣಪತಿ ಹೋಮವು ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಹೊರಗಡೆ ನಿರ್ಮಿಸಲಾಗಿರುವ ಚಪ್ಪರದ ಅಡಿಯಲ್ಲಿ ರಚಿಸಲಾದ 11ಕೋಲು ಧ್ವಜಾಯದ ಹೋಮ ಕುಂಡದಲ್ಲಿ ಕುಕ್ಕಾಡಿ ತಂತ್ರಿ ಪ್ರೀತಮ್ ಪುತ್ತೂರಾಯ ಅವರ ನೇತೃತ್ವದಲ್ಲಿ ನಡೆಯುವುದು.

ಸಂಜೆ ವೇದ ಮೂರ್ತಿ ವಾದಿರಾಜ ಉಪಾಧ್ಯಾಯ ಮೂಲ್ಕಿ ಅವರ ನೇತೃತ್ವದಲ್ಲಿ ಸಭಾಭವನದ ಒಳಗಡೆ ಶ್ರೀಚಕ್ರ ಪೂಜೆ ನಡೆಯಲಿದೆ ಎಂದು ಸಮಿತಿ ಸಂಚಾಲಕ ಪ್ರೀತಂ ಪುತ್ತೂರಾಯ, ಸಮಿತಿ ಸಹ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಕಾರ್ಯಾಧ್ಯಕ್ಷ ರಾಜೇಶ್ ಬನ್ನೂರು, ಉಪಾಧ್ಯಕ್ಷ ಐತ್ತಪ್ಪ ಅವರು ತಿಳಿಸಿದ್ದಾರೆ.

ಸುಮಾರು 15 ಮಂದಿ ವೈದಿಕರು, 15 ಮಂದಿ ಅಷ್ಟದ್ರವ್ಯ ತಯಾರಿಕಾ ಅರ್ಚಕರು ಸೇರಿಕೊಂಡು 1008 ತೆಂಗಿನ ಕಾಯಿಗಳ ಹಸ್ರನಾಳೀಕೇರ ಗಣಯಾಗ ನಡೆಸುವರು. ಪುತ್ತೂರಿನಲ್ಲಿ ಸುಮಾರು 20 ವರ್ಷಗಳ ಹಿಂದೆ ಸಾರ್ವಜನಿಕವಾಗಿ 1008 ಕಾಯಿ ಗಣಯಾಗ ನಡೆದಿತ್ತು. ಇದೀಗ ಮತ್ತೊಮ್ಮೆ ಈ ಗಣಯಾಗ ನಡೆಯುತ್ತಿದೆ. ದೇವಿಗೆ ವಿಶೇಷ ಪೂಜೆಯಾಗಿರುವ ಪ್ರಕೃತಿ ಆರಾಧನೆಯ ಶ್ರೀಚಕ್ರ ಪೂಜೆ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News