ಬಾಂಗ್ಲಾ ನಿರಾಶ್ರಿತ ಶಿಬಿರಗಳಲ್ಲಿ ಆರೋಗ್ಯ ವಿಪತ್ತು: ಎಂಎಸ್ ಎಫ್ ಎಚ್ಚರಿಕೆ

Update: 2017-09-22 17:54 GMT

ಕಾಕ್ಸ್ ಬಝಾರ್ (ಬಾಂಗ್ಲಾದೇಶ), ಸೆ. 22: ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳು ‘ಸಾರ್ವಜನಿಕ ಆರೋಗ್ಯ ವಿಪತ್ತು’ ಸ್ಫೋಟಕ್ಕೆ ಕಾರಣವಾಗಬಹುದಾಗಿದೆ ಎಂದು ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್’ (ಎಂಎಸ್‌ಎಫ್) ಸಂಘಟನೆ ಎಚ್ಚರಿಸಿದೆ.

ಮ್ಯಾನ್ಮಾರ್‌ನಿಂದ ಪಲಾಯನಗೈದಿರುವ ರೊಹಿಂಗ್ಯಾ ಮುಸ್ಲಿಮರು ವಾಸಿಸುತ್ತಿರುವ ಕೊಳೆಗೇರಿಗಳ ಮೂಲಕ ಕೊಳೆತ ನೀರು ಮತ್ತು ಮಲ ಮೂತ್ರಗಳು ಹರಿಯುತ್ತಿವೆ ಎಂದು ಅದು ಹೇಳಿದೆ.

ಬಾಂಗ್ಲಾದೇಶದಲ್ಲಿ 4.2 ಲಕ್ಷಕ್ಕೂ ಅಧಿಕ ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದು, ಅಲ್ಲಿ ಬಹುತೇಕ ಎಲ್ಲ ರೀತಿಯ ಪರಿಹಾರ ಸಾಮಗ್ರಿಗಳ ತೀವ್ರ ಅಭಾವವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News