ಯುವಜನರನ್ನು ಪಕ್ಷದತ್ತ ಸೆಳೆಯುವ ಕೆಲಸ ಮಾಡಬೇಕು: ಆಸ್ಕರ್ ಫೆರ್ನಾಂಡಿಸ್

Update: 2017-09-22 18:08 GMT

ಕೊಣಾಜೆ, ಸೆ. 22: ಇಡೀ ದೇಶದಲ್ಲಿ ಪಕ್ಷದ ಸಂಘಟನೆ ಗಟ್ಟಿಯಾಗಬೇಕು. ಯುವಜನರನ್ನು ಪಕ್ಷದತ್ತ ಸೆಳೆಯುವ ಕೆಲಸ ಮಾಡಬೇಕು. ವಿರೋಧ ಪಕ್ಷಗಳು ಕಾಂಗ್ರೆಸ್ ಹಠಾವೋ ಎಂದು ಹೇಳಿದರೆ ಕಾಂಗ್ರೆಸ್ ಸರಕಾರವು ಯಾರನ್ನೂ ದೂರದೆ ಗರೀಭಿ ಹಠವೋ ಎಂಬ ಘೋಷಣೆಯೊಂದಿಗೆ ದೇಶದಲ್ಲಿ ಬಡತನವನ್ನು ನಿರ್ಮೂಲನೆ ಮಾಡುವ ಕೆಲಸವನ್ನು ಮಾಡುತ್ತಿದೆ ಎಂದು ಎಐಸಿಸಿ ಕಾಯದರ್ಶಿ ಆಸ್ಕರ್ ಫೆರ್ನಾಂಡಿಸ್ ಹೇಳಿದರು.

ಅಸೈಗೋಳಿ ಕೇಂದ್ರ ಮೈದಾನದಲ್ಲಿ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಸಮಿತಿ ಜಂಟಿ ಆಶ್ರಯದಲ್ಲಿ ನಡೆದ ಬೃಹತ್ ಸಮಾವೇಶ ‘ಸಾಮರಸ್ಯ, ಸಂಘಟನೆ, ಅಭಿವೃದ್ದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿರಾ, ಮಹಾತ್ಮಾ ಗಾಂಧಿಜಿ, ರಾಜೀವ್ ಗಾಂಧಿ ಬಗ್ಗೆ ತಿಳಿದುಕೊಳ್ಳದಿದ್ದರೆ ಇಂದಿನ ಜನತೆಗೆ ಕಾಂಗ್ರೆಸಿಗರಾದ ನಾವು ಮುಂದಿನ ಜನತೆಗೆ ಹೇಳದಿದ್ದರೆ ಅವರ ತ್ಯಾಗ ವ್ಯರ್ಥವಾಗಲಿದೆ . ಆದ್ದರಿಂದ ಪಕ್ಷ ಸಂವರ್ಧನೆಯೊಂದಿಗೆ ನಾವು ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕಾಗಿದೆ. ಉಳ್ಳಾಲ ಕ್ಷೇತ್ರದಲ್ಲಿ ಇದಿನಬ್ಬ, ಯು.ಟಿ.ಫರೀದ್ ಅವರು ಉತ್ತಮ ಕಾರ್ಯವನ್ನು ಮಾಡಿದ್ದು ಅದೇ ರೀತಿ ಈಗ ಸಚಿವ ಖಾದರ್ ಅವರು ಉತ್ತಮ ಕೆಲಸಗಳನ್ನು ಮುಂದುವರಿಸಿದ್ದಾರೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ ಸಚಿವ ಯು.ಟಿ. ಖಾದರ್ ಅವರ ಕಾರ್ಯವೈಖರಿಯೇ ಮಂಗಳೂರು ಕ್ಷೇತ್ರವನ್ನು ಕಾಂಗ್ರೆಸ್ ನ ಭದ್ರಕೋಟೆಯನ್ನಾಗಿಸಿದೆ. ನಾಲ್ಕು ಕೋಟಿ ಜನರಿಗೆ ಅನ್ನ ಭಾಗ್ಯ ಸಿಕ್ಕಿದೆ. ನಾಲ್ಕನೆಯ ಬಾರಿ ಅವರು ಶಾಸಕರಾಗುವುದು ಖಚಿತ ಎಂದರು.

ರಾಜ್ಯ ಕಾಂಗ್ರೆಸ್ ಸರಕಾರ ಈಗಾಗಲೇ 75,000ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಅಲ್ಪಸಂಖ್ಯಾತರಿಗೆಂದು 2750ಕೋಟಿ ರೂ. ಅನುದಾನ ವನ್ನು ಕಳೆದ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಅದೆಷ್ಟೋ ಸಂಖ್ಯೆಯಲ್ಲಿ ಸ್ವಾವಲಂಬಿ ಯೋಜನೆ ಕೊಟ್ಟಿದೆ. ಇಡೀ ದೇಶದಲ್ಲಿ ಅತಿ ಹೆಚ್ಚು ಬಂಡವಾಳ ಹೂಡಿಕೆ ಹಾಗೂ ಅತಿ ಹೆಚ್ಚಿನ ಉದ್ಯೋಗ ಸೃಷ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಗುಜರಾತ್ ಹಾಗೂ ಮಹಾರಾಷ್ಟ್ರ ಬಂಡವಾಳ ಹೂಡಿಕೆಯಲ್ಲೂ ಉದ್ಯೋಗ ಸೃಷ್ಟಿಯಲ್ಲೂ ಹಿಂದೆ ಬಿದ್ದಿದೆ ಎಂಬುದು ಉಲ್ಲೇಖನೀಯ ಎಂದರು.

ಕೇಂದ್ರ ಸರಕಾರದ ಆರ್ಥಿಕ ನೀತಿಯಿಂದಾಗಿ ತೆಗೆದುಕೊಂಡ ತೀರ್ಮಾನದಿಂದ ದೇಶದ ಆರ್ಥಿಕ ಸ್ಥಿತಿ ಕುಸಿದಿದೆ. ಜಿಡಿಪ 9ರಿಂದ 5.7ಕ್ಕೆ ಇಳಿದಿದೆ. ದೇಶದ ಪರಿಸ್ಥಿತಿ ಸವಾಲಾಗಿದೆ. ಅಸಹಿಷ್ಣುತೆ ಪರಸ್ಪರ ನಂಬಿಕೆ ಕುಸಿದಿದೆ. ರಮನಾಥ ರೈ ನಾನು ಹಿಂದು ಅಲ್ವಾ, ಅದುವೇ ಅಜೆಂಡಾ ಇಟ್ಟುಕೊಂಡಿದ್ದಾರೆ.

ಜನರನ್ನು ಏಮಾರಿಸುವ ಕೆಲಸ ಮಾಡುವ ಸಲುವಾಗಿ ಬುಲೆಟ್ ಟ್ರೆನ್ ಗೆ ಮುಂದಾಗಿದ್ದಾರೆ. ಜನರಿಗೆ ಏನೋ ತೋರಿಸುತ್ತಿರುವ ನಮ್ಮ ಪ್ರಧಾನಿ "ಸುಳ್ಳಿನ ಸರದಾರ". ಕೇಂದ್ರದ ಡೋಂಗಿ ಸರಕಾರ ಕಿತ್ತೊಗೆಯಲು ನೀವು ಸಿದ್ಧರಾಗಿ ಎಂದರು.

ಸಚಿವ ಯು.ಟಿ.ಖಾದರ್ ಅವರು ಮಾತನಾಡಿ, ಮಂಗಳೂರಿನ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ನ ಶಕ್ತಿ. ಇಲ್ಲಿಂದ ಯುವಕನಾಗಲೀ ಕಾಂಗ್ರೆಸ್ ಕಾರ್ಯಕರ್ತೆ 90ವರ್ಷದ ಮುತ್ತಕ್ಕನನ್ನು ಮುಂದಿನ ಚುನಾವಣೆಗೆ ನಿಲ್ಲಿಸಿದರೂ ನೀವು ಗೆಲ್ಲಿಸಿ ಕೊಡುತ್ತೀರಿ ಎಂಬ ನಂಬಿಕೆ ಇದೆ. ಯಾಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಕೊಟ್ಟ ಮಾತನ್ನು ಉಳಿಸಿದೆ ನುಡಿದಂತೆ ನಡೆದಿದೆ. ಬಡಜನರ ಪರವಾಗಿ ಹಲವಾರು ಭಾಗ್ಯ ಕರುಣಿಸಿದ್ದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕು ಹಸನಾಗಿದೆ ಎಂದರು.

ಹತ್ತು ವರ್ಷ ಬೇರೆ ಪಕ್ಷದವರು ಆಡಳಿತದಲ್ಲಿದ್ದಾಗ ಒಂದೇ ಒಂದು ಹಕ್ಕುಪತ್ರ ಕೊಡಲಿಲ್ಲ. ಕಾಂಗ್ರೆಸ್ ಸರಕಾರ ಎಕ್ಲರಿಗೂ ಎಲ್ಲರಿಗೂ ಸ್ವಾಭಿಮಾನದ ಬದುಕನ್ನು ಕಲ್ಪಿಸಿ ಕೊಟ್ಟಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ಯಾವುದೇ ರಾಜ್ಯದಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ಏಳು ಕೆ.ಜಿ. ಅಕ್ಕಿ ಉಚಿತವಾಗಿ ಕೊಡಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮಾತನಾಡಿದರು.

ವಿಧಾನ ಪರಿಷತ್ ನ ಮುಖ್ಯ ಸಚೇತಕ ಐವನ್ ಡಿಸೋಜ, ಮಾಜಿ ಸಚಿವ ಸಭಾಪತಿ, ಮಾಜಿ ಶಾಸಕ ಕೆ. ಎಂ. ಇಬ್ರಾಹಿಂ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಎಐಸಿಸಿ ಕಾರ್ಯದರ್ಶಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ವಿಷ್ಣುನಾಥನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಕೆಪಿಸಿಸಿ ಕಾರ್ಯದರ್ಶಿ ರಾಜ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಮೂಡ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ರಾಜ್ಯ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಂ. ಎ. ಗಫೂರ್, ಪದವೀಧರ ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಮಂಜುನಾಥ್, ತಾ.ಪಂ. ಅಧ್ಯಕ್ಷ  ಮಹಮ್ಮದ್ ಮೋನು, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಗೇರು ನಿಗಮದ ಸದಸ್ಯ ಬಿ.ಎಚ್. ಖಾದರ್ ಬಂಟ್ವಾಳ, ಮನಾಪ ಕಾರ್ಪೊರೇಟರ್ ಅಪ್ಪಿ, ಧರಣೇಂದ್ರ ಕುಮಾರ್, ಹಿರಿಯರಾದ ವೆಂಕಪ್ಪ ಕಾಜವ, ಕೆಎಸ್‌ಆರ್ ಟಿಸಿ ನಿರ್ದೇಶಕ ರಮೇಶ್ ಶೆಟ್ಟಿ ಬೋಳಿಯಾರು, ಧಾರ್ಮಿಕ ಪರಿಷತ್ ಸದಸ್ಯ, ಕೃಷ್ಣ ಗಟ್ಟಿ ಕೋಟೆಕಾರು ಸೇರಿದಂತೆ ಕಾಂಗ್ರೆಸ್ ಮಖಂಡರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಶಾಂತ್ ಕಾಜವ, ರಾಜ್ಯ ಅಹಾರ ನಿಗಮಕ್ಕೆ ಸದಸ್ಯರಾಗಿ ಆಯ್ಕೆಯಾದ ಟಿ.ಎಸ್. ಅಬ್ದುಲ್ಲಾ, ಕಿಸಾನ್ ಘಟಕದ ಅಧ್ಯಕ್ಷ ಅರುಣ್ ಡಿಸೋಜ ಅಧಿಕಾರ ಸ್ವೀಕರಿಸಿದರು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್, ಮಾಜಿ ಸಚಿವ ಖಮರುಲ್ ಇಸ್ಲಾಂ ಸೇರಿದಂತೆ ಅಗಲಿದ ಕಾಂಗ್ರೆಸ್ ಮುಖಂಡರನ್ನು ಸ್ಮರಿಸಲಾಯಿತು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡ ಅಬ್ದುಲ್ ರಹಿಮಾನ್ ಕೊಣಾಜೆ, ಮುಸ್ತಫಾ ಹರೇಕಳ ಹಾಗೂ ನೌಫಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News