ಕಾವ್ಯಾ ಆತ್ಯಹತ್ಯೆ ಪ್ರಕರಣ: ಸಿಒಡಿ ತನಿಖೆಗೆ ಒತ್ತಾಯಿಸಿ ಮೆರವಣಿಗೆ; 6 ಮಂದಿ ವಶಕ್ಕೆ- ಬಿಡುಗಡೆ
ಮಂಗಳೂರು, ಸೆ. 23: ಮೂಡಬಿದ್ರೆ ಕಾಲೇಜಿನ ವಿದ್ಯಾರ್ಥಿ ಕಾವ್ಯಾ ಆತ್ಯಹತ್ಯೆ ಪ್ರಕರಣವನ್ನು ಸಿಒಡಿ ತನಿಖೆಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿ ಜಸ್ಟಿಸ್ ಫಾರ್ ಕಾವ್ಯ ಹೋರಾಟ ಸಮಿತಿಯ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾದ ಮೆರವಣಿಗೆಯಲ್ಲಿ ಪೊಲೀಸರು 6 ಮಂದಿಯನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
ನಗರದ ಹಂಪನಕಟ್ಟೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಎ.ಬಿ.ಶೆಟ್ಟಿ ವೃತ್ತದ ಬಳಿ ಅರೆಬೆತ್ತಲೆ ಮೆರವಣಿಗೆಗೆ ಯತ್ನಿಸಿದವರ ಸಹಿತ ಕೆಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಕರವೇ ಜಿಲ್ಲಾಧ್ಯಕ್ಷ ಅನಿಲ್‌ರಾಜ್, ಅಭಿಲಾಶ್, ಮಧುಸೂದನ್ ಗೌಡ, ಜೀವನಂ ನೀರುಮಾರ್ಗ ಸಹಿತ 6 ಮಂದಿಯನ್ನು ಪೊಲೀಸರು ವಶಕ್ಕೆಪಡೆದು ಬಿಡುಗಡೆಗೊಳಿಸಿದರು.
ಮೆರವಣಿಗೆಯಲ್ಲಿ ಸಮಿತಿಯ ಸಂಚಾಲಕ ಹಾಗೂ ನ್ಯಾಯವಾದಿ ದಿನಕರ ಶೆಟ್ಟಿ, ದಲಿತ ಮುಖಂಡ ರಘವೀರ್ ಸೂಟರ್‌ಪೇಟೆ, ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಶಾಶ್ವತ ಕೊಟ್ಟಾರಿ, ಹರೀಶ್ ಅಮ್ಟಾಡಿ, ಜನಾರ್ದನ ಅರ್ಕುಳ, ನಿರ್ಮಲ್ ಕುಮಾರ್, ಮುಫೀದ್ ಅಬ್ಬಾಸ್, ಸಾದುದ್ದೀನ್, ತೇಜಸ್ ನಾಯಕ್, ಆ್ಯಸ್ಟಲ್ ಲೋಬೊ, ಮಧುಸೂದನ ಗೌಡ, ಟಿಪ್ಪೇಶ್ ಅಮೀನ್, ನದೀಂ ಅಹ್ಮದ್, ಪ್ರಮೋದ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.