×
Ad

ಕುಮಾರ ಸ್ವಾಮಿ ಆರೋಗ್ಯಕ್ಕಾಗಿ ಜೆಡಿಎಸ್‌ನಿಂದ ವಿಶೇಷ ಪ್ರಾರ್ಥನೆ

Update: 2017-09-23 16:44 IST

ಮಂಗಳೂರು, ಸೆ.23: ದಕ್ಷಿಣಕನ್ನಡ ಜಿಲ್ಲಾ ಯುವ ಜನತಾ ದಳ ವತಿಯಿಂದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಆರೋಗ್ಯಕ್ಕಾಗಿ ನಗರದ ವಿವಿಧ ಕಡೆಗಳಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ನೆರವೇರಿಸಲಾಯಿತು.

ಜೆಡಿಎಸ್ ಹಾಗೂ ಯುವ ಜೆಡಿಎಸ್‌ನ ನಾಯಕರು ಹಾಗೂ ಕಾರ್ಯಕರ್ತರು ನಗರದ ಕುದ್ರೋಳಿ ಗೋಕರ್ಣನಾಥೆಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ರುದ್ರ ಅಭೀಷೇಕ ಪೂಜೆ ಸಲ್ಲಿಸಿದರು. ಬಳಿಕ ನಗರದ ದರ್ಗಾ ಹಾಗೂ ಮಿಲಾಗ್ರಿಸ್ ಚರ್ಚ್‌ನಲ್ಲಿಯೂ ವಿಶೇಷ ಪ್ರಾರ್ಥನೆಯನ್ನು ದ.ಕ. ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ನೇತೃತ್ವದಲ್ಲಿ ನೆರವೇರಿಸಲಾಯಿತು.

ಈ ಸಂದರ್ಭ ಜೆಡಿಎಸ್‌ನ ರಾಜ್ಯ ನಾಯಕರಾದ ಗೋಪಾಲ, ಗೋಪಾಲಕೃಷ್ಣ ಅತ್ತಾವರ, ಫೈಝಲ್, ರತ್ನಾಕರ್ ಸುವರ್ಣ, ನಾಸಿರ್, ಜಿಲ್ಲಾ ಯುವ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂದನ ಗೌಡ, ಜಿಲ್ಲಾ ಯುವ ಸಂಘಟನಾ ಕಾರ್ಯದರ್ಶಿ ಅರ್ಷಕ್ ಇಸ್ಮಾಯಿಲ್, ಜಿಲ್ಲಾ ಯುವ ಕಾರ್ಯದರ್ಶಿ ಡೇಸ್ಮಂಡ್, ಹಿತೇಶ್ ರೈ ಹಾಗೂ ವಿದ್ಯಾರ್ಥಿ ನಾಯಕರಾದ ಸೀನಾನ್, ತೇಜಸ್ ನಾಯಕ್, ಲೋಯ್ಡಾ ಮುಲ್ಕಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News