×
Ad

ಅವಧಿ ಮೀರಿದ ಔಷಧಿಗಳು ಪತ್ತೆ, ದಾಸ್ತಾನು ಕೋಣೆಗೆ ಬೀಗಮುದ್ರೆ

Update: 2017-09-23 19:05 IST

ಗಯಾ(ಬಿಹಾರ),ಸೆ.23: ಇಲ್ಲಿಯ ಸರಕಾರಿ ಜೆಪಿಎನ್ ಆಸ್ಪತ್ರೆಯ ದಾಸ್ತಾನು ಕೋಣೆ ಯಿಂದ ಅವಧಿ ಮೀರಿದ ಔಷಧಗಳು ಸರಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪೂರೈಕೆಯಾಗಿರುವುದು ಪತ್ತೆಯಾದ ಬಳಿಕ ಅದಕ್ಕೆ ಬೀಗಮುದ್ರೆ ಹಾಕಲಾಗಿದ್ದು, ಅದರ ಉಸ್ತುವಾರಿ ಅಧಿಕಾರಿಯನ್ನು ಸೇವೆಯಿಂದ ಅಮಾನತು ಗೊಳಿಸಲಾಗಿದೆ.

 ಇತ್ತೀಚಿಗೆ ಜಿಲ್ಲೆಯಲ್ಲಿನ ಔಷಧಿ ಪೂರೈಕೆ ವ್ಯವಸ್ಥೆಯ ಪುನರ್‌ಪರಿಶೀಲನೆ ಸಂದರ್ಭ ದಲ್ಲಿ ಈ ಅಕ್ರಮ ಬೆಳಕಿಗೆ ಬಂದಿತ್ತು. ಇದರ ಹಿಂದೆಯೇ ಜಿಲ್ಲಾಧಿಕಾರಿ ರವಿ ಅವರು ಔಷಧಿಗಳ ದಾಸ್ತಾನು ಕೋಣೆಗೆ ಬೀಗಮುದ್ರೆ ಹಾಕಿಸಿದ್ದಾರೆ.

39 ವಿವಿಧ ಬಗೆಯ ಅವಧಿ ಮೀರಿದ ಔಷಧಿಗಳು ಪತ್ತೆಯಾಗಿದ್ದು, ದಾಸ್ತಾನು ಕೋಣೆಯ ಉಸ್ತುವಾರಿ ಅಭಯ ಶರ್ಮಾ ಎಂಬಾತನನ್ನು ಅಮಾನತು ಮಾಡಲಾಗಿದೆ ಮತ್ತು ಈ ಬಗ್ಗೆ ತನಿಖೆಗೆ ಐವರು ಸದಸ್ಯರ ತಂಡವೊಂದನ್ನು ರಚಿಸಲಾಗಿದೆ. 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಅದಕ್ಕೆ ಸೂಚಿಸಲಾಗಿದೆ ಎಂದು ಸಿವಿಲ್ ಸರ್ಜನ್ ಡಾ.ಬಬನ್ ಕುಂವರ್ ತಿಳಿಸಿದರು.

ಕಳೆದ ಜನವರಿಯಲ್ಲಿಯೂ ಜೆಪಿಎನ್ ಆಸ್ಪತ್ರೆಯ ಔಷಧಿ ದಾಸ್ತಾನು ಕೋಣೆಯಲ್ಲಿ ಇಂತಹುದೇ ಅಕ್ರಮಗಳು ಪತ್ತೆಯಾಗಿದ್ದವು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News