ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಸ್ವಘೋಷಿತ ದೇವ ಮಾನವನ ಬಂಧನ
Update: 2017-09-23 19:12 IST
ಜೈಪುರ, ಸೆ. 22: ನ್ಯಾಯಮೂರ್ತಿ ಕೆಲಸ ಕೊಡಿಸುತ್ತೇನೆ ಎಂದು ಸುಳ್ಳು ಭರವಸೆ ನೀಡಿ 21 ವರ್ಷದ ಕಾನೂನು ವಿದ್ಯಾರ್ಥಿನಿಯ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ 58 ವರ್ಷದ ಸ್ವಘೋಷಿತ ದೇವ ಮಾನವ ಫಲಾಹರಿ ಮಹಾರಾಜ್‌ನನ್ನು ಶನಿವಾರ ರಾಜಸ್ಥಾನ ಪೊಲೀಸರು ಅಲ್ವಾರ್‌ನಲ್ಲಿ ಬಂಧಿಸಿದರು.
ಕಾನೂನು ವಿದ್ಯಾರ್ಥಿನಿ ವಾಸಿಸುತ್ತಿರುವ ಚತ್ತೀಸ್‌ಗಢದ ಬಿಲಾಸ್‌ಪುರದಿಂದ ಅಲ್ವಾರ್‌ಗೆ ಪ್ರಕರಣದ ಫೈಲ್ ತಲುಪಿದ ಮೂರು ದಿನಗಳ ಬಳಿಕ ಸ್ವಘೋಷಿತ ದೇವ ಮಾನವನ ಬಂಧನವಾಗಿದೆ.
ಫಲಾಹರಿ ಮಹಾರಾಜ್ ಅವರನ್ನು ಬಂಧಿಸಲಾಯಿತು. ನ್ಯಾಯಾಲಯಕ್ಕೆ ಹಾಜರುಪಡಿಸುವ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಾಸ್ ಜೈನ್ ತಿಳಿಸಿದ್ದಾರೆ.
ಉತ್ತರ ಭಾರತದಲ್ಲಿ ಫಲಾಹರಿ ಮಹಾರಾಜ್ ಪ್ರಭಾವ ಹೊಂದಿದ್ದಾರೆ. ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂಬ ವದಂತಿ ಕೂಡ ಹಬ್ಬಿತ್ತು.