‘ಸುಸ್ಥಿರ ಅಭಿವೃದ್ದಿಯತ್ತ ಭಾರತ’- ಆಳ್ವಾಸ್‌ನಲ್ಲಿ ವಿಶೇಷ ಉಪನ್ಯಾಸ

Update: 2017-09-23 14:36 GMT

ಮೂಡುಬಿದಿರೆ, ಸೆ. 23: ಆಳ್ವಾಸ್ ಕಾಲೇಜಿನ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ವತಿಯಿಂದ ‘ಸುಸ್ಥಿರ ಅಭಿವೃದ್ದಿಯತ್ತ ಭಾರತ’ ವಿಶೇಷ ಉಪನ್ಯಾಸ ಕಾರ್ಯಕ್ರಮವು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು.

ಶಿವಮೊಗ್ಗ ಡಿ.ವಿ.ಎಸ್ ಆರ್ಟ್ಸ್ ಆ್ಯಂಡ್ ಕಾಮರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ ಕೆ ಕುಮಾರಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಜನಸಾಮಾನ್ಯರಲ್ಲಿ ಆರ್ಥಿಕ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬ ಕಲ್ಪನೆ ಇದೆ. ಆದರೆ ವಾಸ್ತವದಲ್ಲಿ ಪರಿಸರ ಮತ್ತು ಸಮಾಜದ ಬೆಳವಣಿಗೆಯೂ ಸಹ ದೇಶದ ಅಭಿವೃದ್ಧಿಯಲ್ಲಿ ಕೊಡುಗೆ ನೀಡುತ್ತದೆ ಎಂಬ ಸತ್ಯಾಂಶ ತಿಳಿಯದೇ ಇರುವುದು ದುರಂತ. ಇಂದಿನ ಯುವಜನತೆ ತಮಗೆ ದೊರೆತಿರುವ ಸಂಪನ್ಮೂಲದಿಂದ ಭವಿಷ್ಯದ ಒಳಿತಿಗಾಗಿ ಉಳಿತಾಯ ಮಾಡಿಕೊಂಡು ತಮ್ಮ ಮೂಲಭೂತ ಬೇಡಿಕೆಯನ್ನು ಪೂರೈಸಿಕೊಂಡಾಗ ಅದು ಸುಸ್ಥಿರ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ತಿಳಿಸಿದರು.

ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯಜೀವನ್‌ರಾಮ್ ಮಾತನಾಡಿ, ಈಗಿನ ಶಿಕ್ಷಣ ವ್ಯವಸ್ಥೆಯು ಪ್ರಾಯೋಗಿಕ ಶಿಕ್ಷಣದ ಬದಲಾಗಿ ಪಠ್ಯಾಧಾರಿತ ಶಿಕ್ಷಣ ವ್ಯವಸ್ಥೆಗೆ ಅವಲಂಬಿತವಾಗಿದೆ. ಸುಸ್ಥಿರ ಅಭಿವೃದ್ಧಿಯು ಆರ್ಥಿಕ ಅಭಿವೃದ್ಧಿ ಮಿಗಿಲಾಗಿ ಪರಿಸರದ ಅಭಿವೃದ್ಧಿಯತ್ತ ಗಮನಹರಿಸುತ್ತದೆ ಎಂದು ಹೇಳಿದರು.

ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ರವಿಂದ್ರ ಎಮ್.ಕೆ ಉಪಸ್ಥಿತರಿದ್ದರು. ದೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ವೇತಾ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News