×
Ad

ಪಾಣಿಪತ್ ಶಾಲೆಯಲ್ಲಿ ಬಾಲಕಿಗೆ ಕಿರುಕುಳ: ತಪ್ಪೊಪ್ಪಿಕೊಂಡ ಜಾಡಮಾಲಿ

Update: 2017-09-23 20:27 IST

ಪಾಣಿಪತ್, ಸೆ. 23: ಶಾಲೆಯ ಶೌಚಾಲಯದಲ್ಲಿ 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಇಲ್ಲಿನ ಮಿಲೇನಿಯಂ ಶಾಲೆಯ 22 ವರ್ಷದ ಜಾಡಮಾಲಿ ತರುಣ್ ಕುಮಾರ್ ಬುಧವಾರ ತಪ್ಪೊಪ್ಪಿಕೊಂಡಿದ್ದಾನೆ.

ಗುರುವಾರ ತಡರಾತ್ರಿ ನಡೆದ ವಿಚಾರಣೆ ಸಂದರ್ಭ ತರುಣ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ, ಆರೋಪಿಯನ್ನು ಗುರುವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮುಂದಿನ ತನಿಖೆಗಾಗಿ ಒಂದು ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ನಡುವೆ ಪೊಲೀಸರು ಶಾಲೆಯ ಪ್ರಾಂಶುಪಾಲೆ ಅಮಿತಾ ಕೊಚ್ಚಾರ್ ಅವರ ವಿರುದ್ಧ ಕೂಡ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಹಸಿರು ಟಿ ಶರ್ಟ್ ಧರಿಸಿದ್ದರು ಎಂದು ಬಾಲಕಿ ಹೇಳಿದ್ದಳು. ಕೆಲವು ಭಾವಚಿತ್ರಗಳನ್ನು ತೋರಿಸಿದಾಗ ಬಾಲಕಿ ಆರೋಪಿಯನ್ನು ಗುರುತು ಹಿಡಿದಳು ಎಂದು ಪಾಣಿಪತ್ ಜಿಲ್ಲಾ ಪೊಲೀಸ್ ಅಧೀಕ್ಷಕ ವಿದ್ಯಾವತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News