×
Ad

ಆಗ್ರಾದಲ್ಲಿ ಹಳಿ ತಪ್ಪಿದ ಪ್ಯಾಸೆಂಜರ್ ರೈಲು

Update: 2017-09-23 20:32 IST

ಆಗ್ರಾ, ಸೆ. 23: ಆಗ್ರಾ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಮುಂಜಾನೆ ಅಗ್ರಾ-ಗ್ವಾಲಿಯರ್ ಪ್ಯಾಸೆಂಜರ್ ರೈಲಿನ ಎರಡು ಖಾಲಿ ಬೋಗಿಗಳು ಹಳಿ ತಪ್ಪಿವೆ. ರೈಲು ಸ್ವಚ್ಛತೆಗಾಗಿ ಯಾರ್ಡ್‌ನತ್ತ ಚಲಿಸುತ್ತಿದ್ದಾಗ ಮುಂಜಾನೆ 4 ಗಂಟೆಗೆ ಈ ಘಟನೆ ಸಂಭವಿಸಿತು. ಇದರಿಂದ ಯಾರಿಗೂ ಗಾಯಗಳಾಗಿಲ್ಲ. ಬೋಗಿಗಳು ಹಳಿ ತಪ್ಪಿದ್ದರಿಂದ ರೈಲು ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News