ಹದಗೆಟ್ಟ ಹೆದ್ದಾರಿ ವಿರುದ್ಧ ಆಪ್ ನಿಂದ ಮೌನ ಪ್ರತಿಭಟನೆ
Update: 2017-09-23 21:11 IST
ಮಂಗಳೂರು, ಸೆ. 23: ದಕ್ಷಿಣ ಕನ್ನಡ ಆಮ್ ಆದ್ಮಿ ಪಾರ್ಟಿಯಿಂದ ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ ವಿರುದ್ಧ ಮೌನ ಪ್ರತಿಭಟನೆ ನಗರದ ನಂತೂರ್ ವೃತ್ತದ ಬಳಿ ಜರಗಿತು.
ಸಂಜೆ 4 ರಿಂದ 6 ರ ತನಕ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಆಪ್ ಮುಖಂಡರಾದ ರಾಜೇಂದ್ರ ಕುಮಾರ್, ಕಬೀರ್ ಕಾಟಿಪಳ್ಳ, ಅರ್ಜುನ್, ಜೆರಾರ್ಡ್ ಟವರ್ಸ್, ಜೋಸಪ್ ಮಾರ್ಟಿನ್ ಮುಂತಾದವರು ಪಾಲ್ಗೊಂಡಿದ್ದರು. ಹಾಗೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದರು.
ಈ ಸಂಧರ್ಭ ಬಿತ್ತಿ ಪತ್ರದಲ್ಲಿ 'ನಮ್ಮ ಹೆದ್ದಾರಿ ಸ್ವರ್ಗಕ್ಕೆ ನೇರ ದಾರಿ', 'ಭ್ರಷ್ಟ ಅಧಿಕಾರಿಗಳಿಂದ ಹೆದ್ದಾರಿ ಅನಾಥ' ಮುಂತಾದ ಬರಹಗಳು ಸಾರ್ವಜನಿಕರ ಗಮನ ಸೆಳೆಯಿತು.