×
Ad

ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತೆಗೆ ಅಭಿನಂದನೆ

Update: 2017-09-23 21:57 IST

ಉಡುಪಿ, ಸೆ. 23: ಪ್ರಶಸ್ತಿ ಪುರಸ್ಕೃತ ಕರಂಬಳ್ಳಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಡೆಲ್ಫಿನ್ ಡಿ’ಸೋಜಾ ಅವರನ್ನು ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು)ದ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಬನ್ನಂಜೆ ಬಿಲ್ಲವರ ಸಂಘದ ಸಭಾಭವನದಲ್ಲಿ ಶನಿವಾರ ಸನ್ಮಾನಿಸಲಾಯಿತು.

ಕಷ್ಟವಿದ್ದರೂ, ಸಮಯವನ್ನು ಪರಿಗಣಿಸದೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದಕ್ಕಾಗಿ ಪ್ರಶಸ್ತಿ ತನಗೆ ಒಲಿದು ಬಂದಿದೆ ಎಂದು ಡೆಲ್ಫಿನ್ ಡಿಸೋಜಾ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ನುಡಿದರು.

ಅಂಗನವಾಡಿ ಸಂಘದ ಉಪಾಧ್ಯಕ್ಷೆ ರತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಮುಖಂಡರಾದ ಕೆ. ಶಂಕರ್, ಬಾಲಕೃಷ್ಣ ಶೆಟ್ಟಿ, ಅಂಗನವಾಡಿ ಸಂಘದ ಆಶಾಲತಾ, ಸುನೀತಾ ಪೆರ್ಣಂಕಿಲ, ತಾರಾ, ಪ್ರೇಮಾ, ವಾಣಿ ಜಯರಾಂ ಪಡುಬಿದ್ರಿ, ಯಶೋಧಾ, ಅಂಬಿಕಾ, ಶಕುಂತಳಾ ಮತ್ತಿತರರು ಉಪಸ್ಥಿತರಿದ್ದರು. ಸುಶೀಲಾ ನಾಡ ಸಾ್ವಗತಿಸಿ, ಕಾರ್ಯಕ್ರಮ ನಿರೂಪಿಸಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News