ಪಾಕ್‌ನಿಂದ ಅರಬ್ಬಿ ಸಮುದ್ರದಲ್ಲಿ ನೌಕಾ ನಿಗ್ರಹ ಕ್ಷಿಪಣಿ ಹಾರಾಟ

Update: 2017-09-23 17:26 GMT

ಇಸ್ಲಾಮಾಬಾದ್, ಸೆ. 23: ಪಾಕಿಸ್ತಾನ ನೌಕಾಪಡೆಯು ಶನಿವಾರ ಆಕಾಶದಿಂದ ನೌಕಾ ನಿಗ್ರಹ ಕ್ಷಿಪಣಿಯೊಂದನ್ನು ಹಾರಿಸಿದ್ದು, ಅರಬ್ಬಿ ಸಮುದ್ರದಲ್ಲಿನ ಗುರಿಯೊಂದಕ್ಕೆ ಬಡಿದಿದೆ.

ಇದು ತನ್ನ ಪಡೆಯ ಯುದ್ಧ ಸಿದ್ಧತೆಯನ್ನು ತೋರಿಸಿದೆ ಎಂದು ಆ ದೇಶದ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಮುಹಮ್ಮದ್ ಝಕಾವುಲ್ಲಾ ಹೇಳಿದರು.

‘ಸೀ ಕಿಂಗ್’ ಹೆಲಿಕಾಪ್ಟರೊಂದು ‘ಆಕಾಶದಿಂದ ಮೇಲ್ಮೈಗೆ’ ಹಾರುವ ಕ್ಷಿಪಣಿಯನ್ನು ಉಡಾಯಿಸಿತು ಹಾಗೂ ಅದು ತನ್ನ ಗುರಿಗೆ ‘ಅತ್ಯಂತ ನಿಖರವಾಗಿ’ ಬಡಿಯಿತು ಎಂದು ನೌಕಾಪಡೆಯ ವಕ್ತಾರರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News