ಅ.2: ಹಕ್ಕೊತ್ತಾಯ ಚಳುವಳಿ
Update: 2017-09-24 19:33 IST
ಮಂಗಳೂರು, ಸೆ. 24: ಮನಪಾ ವ್ಯಾಪ್ತಿಯ ಕಣ್ಣೂರು, ಶಕ್ತಿನಗರ, ಇಡ್ಯಾ, ಸುರತ್ಕಲ್ ಪ್ರದೇಶಗಳಲ್ಲಿ ಮನೆ ನಿರ್ಮಿಸಲು ನಿವೇಶನಕ್ಕೆ ಭೂಮಿ ಕಾಯ್ದಿರಿಸಲಾಗಿದ್ದರೂ ಕೂಡ ನಿವೇಶನ ಹಂಚಿಕೆಯಾಗುತ್ತಿಲ್ಲ. ಈ ಬಗ್ಗೆ ಮನಪಾ ಆಯುಕ್ತರು ಕೂಡ ಸ್ಪಷ್ಟ ನಿಲುವು ವ್ಯಕ್ತಪಡಿಸುತ್ತಿಲ್ಲ. ಇದನ್ನು ಖಂಡಿಸಿ ಅ.2ರಂದು ಸಂಜೆ 4ರಿಂದ 6ರ ತನಕ ಕುಲಶೇಖರ, ಪಡೀಲ್, ಉರ್ವಸ್ಟೋರ್, ಕಾವೂರು ಜಂಕ್ಷನ್‌ಗಳಲ್ಲಿ ಹಕ್ಕೊತ್ತಾಯ ಮಂಡಿಸಲು ನಿರ್ಧರಿಸಲಾಗಿದೆ ಎಂದು ನಿವೇಶನ ರಹಿತರ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಬೋಳೂರು ತಿಳಿಸಿದ್ದಾರೆ.