×
Ad

ಜಿಎಸ್‌ಟಿ ರಿಟರ್ನ್ ಸಲ್ಲಿಕೆ ಗಡುವು 2 ತಿಂಗಳು ವಿಸ್ತರಣೆಗೆ ಸಿಐಐ ಆಗ್ರಹ

Update: 2017-09-24 20:47 IST

ಹೊಸದಿಲ್ಲಿ,ಸೆ.24: ಕೆಲವು ಸಮಸ್ಯೆಗಳು ಬಾಕಿಯುಳಿದಿರುವ ಹಿನ್ನೆಲೆಯಲ್ಲಿ ಜಿಎಸ್‌ಟಿ ರಿಟರ್ನ್‌ಗಳನ್ನು ಸಲ್ಲಿಸಲು ಗಡುವನ್ನು ಎರಡು ತಿಂಗಳು ವಿಸ್ತರಿಸುವಂತೆ ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ)ವು ರವಿವಾರ ಸರಕಾರವನ್ನು ಆಗ್ರಹಿಸಿದೆ.

 ಆನ್‌ಲೈನ್ ಫೈಲಿಂಗ್‌ನಲ್ಲಿಯ ಸಮಸ್ಯೆಗಳಿಂದಾಗಿ ಜಿಎಸ್‌ಟಿಆರ್-1, ಜಿಎಸ್‌ಟಿಆರ್-2 ಮತ್ತು ಜಿಎಸ್‌ಟಿಆರ್-3 ಅನ್ನು ಸಲ್ಲಿಸಲು ಅಂತಿಮ ಗಡುವನ್ನು ಎರಡು ತಿಂಗಳು ಮುಂದೂಡುವಂತೆ ಸಿಐಐ ಅಭಿಪ್ರಾಯಿಸಿದೆ. ಇದು ವ್ಯವಸ್ಥೆಯಲ್ಲಿ ಸ್ಥಿರತೆಯನ್ನು ತರಲು ನೆರವಾಗುತ್ತದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

 ಕಳೆದ ತಿಂಗಳು ಜಿಎಸ್‌ಟಿಎನ್ ರಿಟರ್ನ್ ಸಲ್ಲಿಕೆ ಪೋರ್ಟಲ್‌ನಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಕೊಂಡ ಬಳಿಕ ಜಿಎಸ್‌ಟಿಆರ್-3ಬಿ ಸಲ್ಲಿಕೆಗೆ ಅಂತಿಮ ದಿನಾಂಕವನ್ನು ಸರಕಾರವು ಆ.25ರವರೆಗೆ ಮುಂದೂಡಿತ್ತು.

ಈ ತಿಂಗಳ ಆರಂಭದಲ್ಲಿ ಮತ್ತೆ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಿದ್ದರಿಂದ ಸರಕಾರವು ಜಿಎಸ್‌ಟಿ ಸೇಲ್ಸ್ ರಿಟರ್ನ್- ಜಿಎಸ್‌ಟಿಆರ್ 1 ಅನ್ನು ಸಲ್ಲಿಸುವ ಅಂತಿಮ ಗಡುವನ್ನು ಸೆ.5ರಿಂದ ಸೆ.10ಕ್ಕೆ ವಿಸ್ತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News