ಉಡುಪಿ: ಹೆಚ್ಚುವರಿ ಎಸ್ಪಿ ಅಧಿಕಾರ ಸ್ವೀಕಾರ
Update: 2017-09-24 21:12 IST
ಉಡುಪಿ, ಸೆ.24: ಉಡುಪಿ ಜಿಲ್ಲಾ ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಗಿ ಕುಮಾರಚಂದ್ರ ಇಂದು ಅಧಿಕಾರ ವಹಿಸಿಕೊಂಡರು.
2010ನೆ ಕೆಎಎಸ್ ಬ್ಯಾಚಿನ ಇವರು ವೀರಾಜಪೇಟೆ ಹಾಗೂ ಬಳ್ಳಾರಿಯ ಹೊಸಪೇಟೆಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ 2017ರ ಜುಲೈಯಲ್ಲಿ ಮಂಗಳೂರು ಆಂತರಿಕ ಭದ್ರತಾ ಪಡೆಯ ಪೊಲೀಸ್ ಅಧೀಕ್ಷಕ ರಾಗಿ ಪದನ್ನೋತ್ತಿ ಹೊಂದಿದರು.
ಪೊಲೀಸ್ ವೃತ್ತಿಗೆ ಮೊದಲು ಅವರು 18 ವರ್ಷಗಳ ಕಾಲ ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಮೂಲತಃ ಬಂಟ್ವಾಳ ತಾಲೂಕಿನ ಗೊಳ್ತ ಮಜಲಿನವರಾದ ಕುಮಾರಚಂದ್ರ ಪ್ರಸ್ತುತ ಬೆಳ್ತಂಗಡಿಯ ನಿವಾಸಿಯಾಗಿದ್ದಾರೆ. ಅಧಿಕಾರ ವಹಿಸಿಕೊಂಡ ಇವರನ್ನು ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಸ್ವಾಗತಿಸಿ ಅಭಿನಂದಿಸಿದರು.