ಗಾಂಜಾ ಸೇವನೆ: ಓರ್ವನ ಬಂಧನ
Update: 2017-09-24 21:13 IST
ಉಡುಪಿ, ಸೆ.24: ದೊಡ್ಡಣಗುಡ್ಡೆ ಬಸ್ ನಿಲ್ದಾಣದ ಬಳಿ ಸೆ.23ರಂದು ಬೆಳಗ್ಗೆ ಗಾಂಜಾ ಸೇವಿಸುತ್ತಿದ್ದ ಓರ್ವನನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.
ಕುಂಜಿಬೆಟ್ಟು ಮನೋಳಿಗುಜ್ಜಿಯ ತೌಫೀಕ್(25) ಬಂಧಿತ ಆರೋಪಿ. ಬಸ್ ನಿಲ್ದಾಣದ ಬಳಿ ಗಾಂಜಾ ಸೇವಿಸುತ್ತಿದ್ದ ತೌಫಿಕ್‌ನನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಮಣಿಪಾಲ ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ತಜ್ಞರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಇದರಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದರು.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.