×
Ad

​ಮನೆಗೆ ನುಗ್ಗಿ ಮಹಿಳೆಯ ಸರ ಕಳವು

Update: 2017-09-24 21:14 IST

ಮಲ್ಪೆ, ಸೆ.24: ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ ಮಹಿಳೆಯ ಸರ ಕಸಿದು ಪರಾರಿ ಯಾಗಿರುವ ಘಟನೆ ಸೆ.22ರಂದು ರಾತ್ರಿ 8ಗಂಟೆ ಸುಮಾರಿಗೆ ತೆಂಕನಿಡಿ ಯೂರು ಗ್ರಾಮದ ಬಡಮನೆ ಎಂಬಲ್ಲಿ ನಡೆದಿದೆ.

 ಶ್ಯಾಮ್ ಶೆಟ್ಟಿ ಎಂಬವರ ಪತ್ನಿ ಸುಲೋಚನಾ ಎಸ್.ಶೆಟ್ಟಿ ಮನೆಯಲ್ಲಿರುವಾಗ ಅವರ ಪರಿಚಯದ ಕೆಳಾರ್ಕಳಬೆಟ್ಟು ವಿಷ್ಣುಮೂರ್ತಿ ನಗರದ ಸಚಿನ್ ಎಂಬಾತ ಅಕ್ರಮ ಪ್ರವೇಶ ಮಾಡಿ ಹಣ ಕೇಳಿದ್ದು, ಆಗ ಸುಲೋಚನಾ ಹಣ ನೀಡದಿ ದ್ದಾಗ ಅವರ ಕುತ್ತಿಗೆ ಕೈ ಹಾಕಿ ಚಿನ್ನದ ಸರವನ್ನು ಎಳೆದನು. ಈ ವೇಳೆ ಸುಲೋಚನಾ ಕೂಗಿದಾಗ ಆತ ತುಂಡು ಚಿನ್ನದೊಂದಿಗೆ ಪರಾರಿಯಾದನು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News