×
Ad

ಉಪವಾಸವಿದ್ದೂ, ಮ್ಯಾರಥಾನ್ ಓಡಿದ ಮಂಗಳೂರು ಮೇಯರ್ ಕವಿತಾ ಸನಿಲ್

Update: 2017-09-24 21:35 IST

ಮಂಗಳೂರು, ಸೆ. 24:  ಅಲ್‌ಝೈಮರ್ (ಮರೆವು ರೋಗ) ಖಾಯಿಲೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಂಗಳೂರಿನ ಫಾರಂ ಫಿಝಾ ಮಾಲ್ ಹಾಗೂ ನಿಮ್ಹಾನ್ಸ್ ವತಿಯಿಂದ ರವಿವಾರ ನಗರದ ಫಾರಂ ಫಿಝಾ ಮಾಲ್‌ನಲ್ಲಿ ‘ಪರ್ಪಲ್ ರನ್’ಗೆ ಪೊಲೀಸ್ ಆಯುಕ್ತ ಟಿ. ಆರ್. ಸುರೇಶ್ ಚಾಲನೆ ನೀಡಿದರು.

ನವರಾತ್ರಿಗಾಗಿ 9 ದಿನಗಳ ಕಾಲ ಉಪವಾಸದಲ್ಲಿರುವ ಮೇಯರ್ ಕವಿತಾ ಸನಿಲ್ ಕೂಡಾ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಸುಮಾರು 3 ಕಿ.ಮೀ. ಓಡಿ ನೆರೆದಿದ್ದವರ ಗಮನ ಸೆಳೆದರು.

10 ಕಿ.ಮೀ., 5 ಕಿ.ಮೀ, 3 ಕಿ.ಮೀ,. ಹೀಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಮಕ್ಕಳು, ಯುವತಿಯರು, ಹಿರಿಯರು ಆಸಕ್ತಿಯಿಂದ ಮ್ಯಾರಥಾನ್‌ನಲ್ಲಿ ಭಾಗವಹಿಸಿದರು.

ಮುಂಜಾನೆ 6 ಗಂಟೆಗೆ ಪಾಂಡೇಶ್ವರದಲ್ಲಿರುವ ಮಾಲ್‌ನಿಂದ ಆರಂಭವಾದ ಮ್ಯಾರಥಾನ್ ವಿವಿಧೆಡೆ ಸಾಗಿ ಮರಳಿ ಮಾಲ್ ಮುಂದೆ ಕೊನೆಗೊಳಿಸಿತು. 2,270 ಮಂದಿ ಓಟದಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News