ಬೇಕರಿ ಉತ್ಪಾದನೆ ಉದ್ಯಮಶೀಲತೆ ತರಬೇತಿ

Update: 2017-09-24 16:13 GMT

ಉಡುಪಿ, ಸೆ.24: ಕೇಂದ್ರದ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಂಸ್ಥೆಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವಿವಿದೋದ್ದೇಶ ತರಬೇತಿ ಕೇಂದ್ರ ಒಂದು ವಾರ ಅವಧಿಯ ಬೇಕರಿ ಉತ್ಪಾದನೆ ಉದ್ಯಮಶೀಲತೆ ತರಬೇತಿಯನ್ನು ನಾಲ್ಕು ತಂಡಗಳಿಗೆ ಹಮ್ಮಿಕೊಂಡಿದೆ.

ಮೊದಲ ತಂಡಕ್ಕೆ ಅ.9ರಿಂದ ತರಬೇತಿ ನೀಡಿದರೆ, ಎರಡನೇ ತಂಡಕ್ಕೆ ಅ.23, ಮೂರನೇ ತಂಡಕ್ಕೆ ಅ.30 ಹಾಗೂ ನಾಲ್ಕನೇ ತಂಡಕ್ಕೆ ನ.6ರಿಂದ ತರಬೇತಿಯನ್ನು ನೀಡಲಾಗುವುದು. ಈ ತರಬೇತಿ ಡಾಲರ್ ಅಕಾಡೆಮಿ ಫಾರ್ ಸ್ಕಿಲ್ ಮತ್ತು ಎಂಟರ್‌ಪೂರ್ಯೃನರ್‌ಶಿಪ್, 15 ಎರಡನೇ ಮಹಡಿ, ಎಚ್‌ಎಎಸ್ ಆರ್ಕೆಡ್ಸ್ ರಸ್ತೆ, ಜಾಲಹಳ್ಳಿ ಕ್ರಾಸ್, ಬೆಂಗಳೂರು 560057 ಇಲ್ಲಿ ನಡೆಯಲಿದೆ.

10ನೇ ತರಗತಿ ತೇರ್ಗಡೆ ಹೊಂದಿರುವ 16ರಿಂದ 45 ವಯೋಮಿತಿಯ ಅಭ್ಯರ್ಥಿಗಳು ಈ ತರಬೇತಿ ಪಡೆಯಲು ಅರ್ಹತೆ ಹೊಂದಿದ್ದಾರೆ. ತರಬೇತಿ ಮುಗಿದ ಬಳಿಕ ತರಬೇತಿ ಸಂಸ್ಥೆ, ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವಂತ ಬೇಕರಿ ಉದ್ಯಮ ಆರಂಭಿಸಲು, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಪಿಎಂಇಜಿಪಿ ಯೋಜನೆಯಡಿ ಆರ್ಥಿಕ ಸಹಾಯ ಪಡೆಯಲು ಅಗತ್ಯವಾದ ಮಾರ್ಗದರ್ಶನ ನೀಡಲಿದೆ. ಆಸಕ್ತರು ಈ ಕುರಿತ ಮಾಹಿತಿಗಾಗಿ ಮೊಬೈಲ್ ನಂ.:9148577075, 080-41688560ನ್ನು ಸಂಪರ್ಕಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News