ಶ್ರೀನಗರ: 6ನೇ ಶತಮಾನದ ಶಿವನ ವಿಗ್ರಹ ಪತ್ತೆ
Update: 2017-09-24 22:56 IST
ಶ್ರೀನಗರ, ಸೆ. 24: ನಗರದ ಹೊರವಲಯದ ಹರ್ವಾನ ಪ್ರದೇಶದಲ್ಲಿ ಕಾರ್ಮಿಕರು ಜಲ ಸಂಗ್ರಹಾಗಾರವೊಂದರ ಹೂಳು ತೆಗೆಯುತ್ತಿರುವಾಗ 6ನೇ ಶತಮಾನಕ್ಕೆ ಸೇರಿದ ಏಕಮುಖ ಶಿವನ ವಿಗ್ರಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಡಾಕಾರದಲ್ಲಿರುವ ಈ ವಿಗ್ರಹ 2.5 ಅಡಿ ಎತ್ತರ ಹೊಂದಿದೆ. ಈ ವಿಗ್ರಹವನ್ನು ಪೊಲೀಸರು ಪುರಾತತ್ವ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಕಾಶ್ಮೀರದಲ್ಲಿ ಇಂತಹ ವಿಗ್ರಹವೊಂದು ಮೊದಲ ಬಾರಿಗೆ ಪತ್ತೆಯಾಗಿದೆ. ಹರ್ವಾನ ಪ್ರದೇಶವನ್ನು ಪಾರಂಪರಿಕ ನಿವೇಶನ ಎಂದು ಪರಿಗಣಿಸಲಾಗಿದೆ. ಇದಕ್ಕೆ ಪುರಾತತ್ವ ಪ್ರಾಮುಖ್ಯತೆ ಇದೆ. ಇಲ್ಲಿ ಬೌದ್ಧ ಧರ್ಮದ ಅತೀ ಪ್ರಾಚೀನ ನಿವೇಶನ ಕೂಡ ಇದೆ ಎಂದು ಪುರಾತತ್ವ ಇಲಾಖೆಯ ನಿರ್ದೇಶಕ ಮುಹಮ್ಮದ್ ಶಫಿ ಝಾಹಿದ್ ಅವರು ತಿಳಿಸಿದ್ದಾರೆ.