×
Ad

ಬಣ್ಣಗುರುಡು ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪ್ರವೇಶ ನೀಡಿ: ಸುಪ್ರೀಂ ಕೋರ್ಟ್

Update: 2017-09-24 22:58 IST

ಹೊಸದಿಲ್ಲಿ, ಸೆ. 24: ಪ್ರವೇಶ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಇಬ್ಬರು ಬಣ್ಣಗುರುಡು ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಂಬಿಬಿಎಸ್ ಕೋರ್ಸ್ ಸೇರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ತನ್ನ ಕ್ರಮವನ್ನು ನ್ಯಾಯದ ಅತೀಂದ್ರಿಯ ಪ್ರಾಮುಖ್ಯತೆ ಎಂದು ಬಣ್ಣಿಸಿರುವ ಸುಪ್ರೀಂ ಕೋರ್ಟ್, ಈ ಪ್ರಕರಣದ ಸನ್ನಿವೇಶ ಹಾಗೂ ವಿಲಕ್ಷಣ ಸತ್ಯಕ್ಕೆ ಸಂವಿಧಾನದ 142 ನಿಯಮದ ಅಡಿಯಲ್ಲಿ ವಿಶೇಷ ತೀರ್ಪು ನೀಡುವ ಅಗತ್ಯವಿದೆ ಎಂದಿದೆ.

ನೀಟ್ ಅಸ್ತಿತ್ವದಲ್ಲಿ ಇರುವುದಕ್ಕಿಂತ ಮುನ್ನ ತ್ರಿಪುರ ಸರಕಾರ 2015ರಲ್ಲಿ ಆಯೋಜಿಸಿದ್ದ ಪ್ರವೇಶ ಪರೀಕ್ಷೆಯಲ್ಲಿ ಈ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದುಕೊಂಡಿದ್ದರು. ಎಂಬಿಬಿಎಸ್ ಕೋರ್ಸ್‌ಗೆ ಸೇರುವುದನ್ನು ಶಾಸನಬದ್ಧವಾಗಿ ತಡೆಯಲು ಅಸಾಧ್ಯ. ಆದರೆ, ಬಣ್ಣಗುರುಡು ಎಂದು ಕರೆಯಲಾಗುವ ಸಿವಿಡಿಯಿಂದ ಈ ವಿದ್ಯಾರ್ಥಿಗಳು ಬಳಲುತ್ತಿರುವುದರಿಂದ ಎಂಬಿಬಿಎಸ್‌ಗೆ ಪ್ರವೇಶದಿಂದ ವಂಚಿತರಾಗಬೇಕಾಯಿತು.

 ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರೂ ಸಿವಿಡಿಯಿಂದ ಈ ಇಬ್ಬರು ವಿದ್ಯಾರ್ಥಿಗಳು ಬಳಲುತ್ತಿರುವ ಕಾರಣಕ್ಕೆ ಎಂಬಿಬಿಎಸ್ ಕೋರ್ಸ್‌ಗೆ ಎಂಸಿಐ ಹಾಗೂ ತ್ರಿಪುರಾ ವೈದ್ಯಕೀಯ ಕಾಲೇಜು ಪ್ರವೇಶ ನಿರಾಕರಿಸಿತ್ತು.ಈ ಬಗ್ಗೆ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News