ಸರಕಾರದ ಜನಪರ ಯೋಜನೆಗಳಿಂದ ಜನಮೆಚ್ಚುಗೆ: ಸಚಿವ ರೈ
ಬಂಟ್ವಾಳ, ಸೆ. 25: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನಪರ ಯೋಜನೆಗಳಿಂದ ಜನಮೆಚ್ಚುಗೆ ಗಳಿಸಿದೆ. ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ನಿವೇಶನ, ಮನೆ ನೀಡುವ ಕಾರ್ಯಕ್ರಮ ಮಾಡಿದ್ದು,ಕಾಂಗ್ರೆಸ್ ಸರಕಾರ. ಈ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾವಳಮೂಡೂರು ಗ್ರಾಪಂ ವ್ಯಾಪ್ತಿಯ ಕಾವಳಕಟ್ಟೆಯಲ್ಲಿ ಕಾಂಗ್ರೆಸ್‍ನಿಂದ ಮನೆ ಮನೆ ಭೇಟಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಂಗ್ರೆಸ್ ವಕ್ತಾರ ರಾಜ್‍ಕುಮಾರ್ ಬೆಂಗಳೂರು, ಜಿಪಂ ಸದಸ್ಯ ಬಿ. ಪದ್ಮಶೇಖರ ಜೈನ್, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ. ಬಂಗೇರ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಕಾಂಗ್ರೆಸ್ ಪ್ರಮುಖರಾದ ಜನಾರ್ದನ ಚಂಡ್ತಿಮಾರ್, ಜಗದೀಶ ಕೊಯಿಲ, ಮಲ್ಲಿಕಾ ಶೆಟ್ಟಿ, ವಳಾರ್ ಬಂಟ್ವಾಳ, ಕಾವಳಮೂಡೂರು ಗ್ರಾಪಂಅಧ್ಯಕ್ಷ ಸಂತೋಷ ಪೂಂಜಾ, ಕಾವಳಮೂಡೂರು ಕಾಂಗ್ರೆಸ್ ವಲಯಾಧ್ಯಕ್ಷ ಬಾಲಕೃಷ್ಣ ಅಂಚನ್, ಕಾವಳಪಡೂರು ವಲಯಾಧ್ಯಕ್ಷ ಚಂದ್ರಶೇಖರ ಕರ್ಣ, ಗ್ರಾಪಂ ಸದಸ್ಯರಾದ ಸತೀಶ್ ಪಡಂತ್ರ್ಯಬೆಟ್ಟು, ಇಸ್ಮಾಯಿಲ್ ಸಿದ್ದೀಕ್, ನಝೀರ್, ಚಂಪಾಸುರೇಶ್ ಮತ್ತಿತರರು ಉಪಸ್ಥಿತರಿದ್ದರು.