×
Ad

ಕಾರ್ತಿ ಚಿದಂಬರಂಗೆ ಸೇರಿದ 1.16 ಕೋ. ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

Update: 2017-09-25 20:15 IST

ಹೊಸದಿಲ್ಲಿ, ಸೆ.25: ಏರ್‌ಸೆಲ್ - ಮ್ಯಾಕ್ಸಿಸ್ ವ್ಯವಹಾರದಲ್ಲಿ ಹಣಚಲುವೆ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಐಡಿ), ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಸೇರಿದ ಹಾಗೂ ಅವರೊಂದಿಗೆ ಸಂಪರ್ಕ ಇದೆ ಎನ್ನಲಾಗಿರುವ ಸಂಸ್ಥೆಯೊಂದರ 1.16 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

 ಕಾರ್ತಿಯವರ ಹೆಸರಲ್ಲಿ ಇರುವ ಠೇವಣಿ, ಉಳಿತಾಯ ಖಾತೆಯಲ್ಲಿರುವ ಹಣ ಸೇರಿ ಸುಮಾರು 90 ಲಕ್ಷ ರೂ. ಮೌಲ್ಯದ ಆಸ್ತಿ ಹಾಗೂ ಕಾರ್ತಿ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿರುವ ‘ಫರ್ಮ್ ಅಡ್ವಾಂಟೇಜ್ ಸ್ಟ್ರಟೆಜಿಕ್ ಕನ್ಸಲ್ಟಿಂಗ್ ಪ್ರೈ. ಲಿ’ ಹೆಸರಲ್ಲಿರುವ 26 ಲಕ್ಷ ರೂ. ಮೌಲ್ಯದ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ. ಅಲ್ಲದೆ ಗುರ್ಗಾಂವ್‌ನಲ್ಲಿ ತಾನು ಹೊಂದಿದ್ದ ಆಸ್ತಿಯನ್ನು ಕಾರ್ತಿ ‘ವಿಲೇವಾರಿ’ ಮಾಡಿದ್ದು, ಹಲವು ಬ್ಯಾಂಕ್ ಖಾತೆಗಳನ್ನು ಮುಚ್ಚಿದ್ದಾರೆ. ಅಲ್ಲದೆ ಇನ್ನೂ ಕೆಲವು ಬ್ಯಾಂಕ್ ಖಾತೆಗಳನ್ನು ಮುಚ್ಚಲು ಪ್ರಯತ್ನಿಸಿದ್ದಾರೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News