×
Ad

ಕಾಪು ಬೀಚ್‍ನಲ್ಲಿ ಸ್ಕೂಬ ಡೈವಿಂಗ್ ಅಕ್ಬೋಬರ್ ಅಂತ್ಯಕ್ಕೆ ಆರಂಭ

Update: 2017-09-25 20:16 IST

ಕಾಪು.ಸೆ.25: ಲೈಟ್ ಹೌಸ್ ತಾಣವಾದ ಕಾಪು ಬೀಚ್‍ನಲ್ಲಿ ಸಮುದ್ರದೊಳಗೆ ಹವಳದ ಕಲ್ಲು, ವಿವಿಧ ಬಗೆಯ ಮೀನು, ಸಸ್ಯ, ಜೀವರಾಶಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಒದಗಲಿದೆ.

ಹೌದು ಪ್ರವಾಸೋಧ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರವಾಸೋಧ್ಯಮ ಇಲಾಖೆ ಸ್ಕೂಬ ಡೈವಿಂಗ್ ಆರಂಭಿಸುವ ಬಗ್ಗೆ ಯೋಜನೆಯನ್ನು ರೂಪಿಸಿದೆ. ಈ ಮೂಲಕ ಕಾಪು ಬೀಚ್ ಇನ್ನು ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. 

ಈ ಮೊದಲು ಜಿಲ್ಲೆಯ ಪ್ರಸಿದ್ಧ ಬೀಚ್‍ಗಳಲ್ಲಿ ಒಂದಾದ ಮಲ್ಪೆಯಲ್ಲಿ ಸ್ಕೂಬ ಡೈವಿಂಗ್ ಆರಂಭಿಸಲು ಮುಂದಾಗಿತ್ತು. ಇದಕ್ಕಾಗಿ ತಜ್ಞರ ಸಮಿತಿಯ ಪರಿಶೀಲನೆಯೂ ನಡೆಸಿತ್ತು. ಆದರೆ ಇಲ್ಲಿ ಸಮುದ್ರ ಕಿನಾರೆಯ 30 ಮೀಟರ್ ಆಳ ಬೇಕಾಗಿರುವುದರಿಂದ ಅದು ಸಾಧ್ಯವಾಗಲಿಲ್ಲ. 

ಕಾಪು ಕಡಲಕೀನಾರೆಯಲ್ಲಿ ತಜ್ಞರಿಂದ ಪರಿಶೀಲನೆ ನಡೆದು ಸ್ಕೂಬ ಡೈವಿಂಗ್‍ಗೆ ಎಲ್ಲಾ ರೀತಿಯ ಪ್ರಶಸ್ತ ಸ್ಥಳವಾಗಿದೆ ಎಂದು ತಜ್ಞರು ವರದಿ ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್ ಕೊನೆಯ ವಾರದಲ್ಲಿ ಸಾಹಸ ಜಲಕ್ರೀಡೆಯ ಸೊಬಗು ಕಾಪುವಿನಲ್ಲಿ ಕಾಣಲಿದ್ದೇವೆ. 

ಸ್ಕೂಬ ಡೈವಿಂಗ್: ಬೆನ್ನಿಗೆ ಆಕ್ಸಿಜನ್ ಸಿಲಿಂಡರ್ ಕಿಟ್, ದೇಹಕ್ಕೆ ನೀರು ಸೋಕದಂತೆ ಪ್ಲಾಸ್ಟಿಕ್-ರಬ್ಬರ್ ಕೋಟೆಡ್ ಜಾಕೆಟ್ ತೊಡಿಸಿ ಸಮುದ್ರದಾಳಕ್ಕೆ  ಧುಮುಕುವ ಕಲೆಯೇ ಸ್ಕೂಬ ಡೈವಿಂಗ್. ಸ್ಕೂಬವನ್ನು  ಮೊದಲ ಭಾರಿ ಕಲಿಯುವವರಿಗೆ, ತರಬೇತುದಾರರ ಜೊತೆಗೆ 30 ಮೀ ಆಳಕ್ಕೆ  ಮಾತ್ರ ಬಿಡಲಾಗುತ್ತದೆ. 

ಸಮುದ್ರದೋಳಗೆ ಹವಳದ ಕಲ್ಲು, ವಿವಿಧ ಬಗೆಯ ಮೀನು, ಸಸ್ಯ, ಜೀವರಾಶಿಗಳನ್ನು ಕಣ್ತುಂಬಿಕೊಳ್ಳುವುದು ಸ್ಕೂಬ ಡೈವಿಂಗ್‍ನ ಒಂದು ಅದ್ಬುತ ಅನುಭವವಾಗಿದೆ. ಜಲ ಸಾಹಸ ಮತ್ತು ಜಲಚರ ಜೀವವೈವಿಧ್ಯದ ಬಗೆಯಲ್ಲಿ ಆಸಕ್ತರನ್ನು ಸೆಳೆಯುತ್ತದೆ. ಅಲ್ಲದೇ ಸಮುದ್ರದೊಳಗಿನ ಸಂಶೊಧನೆಯನ್ನು ನಡೆಸಬಹದಾಗಿದೆ. 

ಪಾಂಡಿಚೇರಿ, ಅಂಡಮಾನ್- ನಿಕೋಬಾರ್, ಲಕ್ಷದ್ವೀಪ,  ಹಾಗೂ ಗೋವಾ ಬಿಟ್ಟರೆ ಕರ್ನಾಟಕದಲ್ಲಿ ಸ್ಕೂವಾ ಡೈವಿಂಗ್‍ಗೆ ನೇತ್ರಾಣಿಯಲ್ಲಿ ಮಾತ್ರ ಪ್ರಶಸ್ತವಾದ ಸ್ಥಳವಾಗಿದೆ ಅದು ಬಿಟ್ಟರೆ ತಜ್ಞರ ವರದಿ ಪ್ರಕಾರ ಕಾಪು ಮತ್ತು ಮಲ್ಪೆಯಲ್ಲಿಯೂ ಸ್ಕೂಬ ಡೈವಿಂಗ್ ನಡೆಸಬಹುದು ಎಂದು ಸೂಚನೆ ನೀಡಿದ್ದಾರೆ. 

ವೆಸ್ಟ್ ಕೋಸ್ಟ್ ನಿಂದ ಟೆಂಡರ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಸ್ಕೂಬಾ ಡೈವ್‍ಗೆ ಅವಕಾಶ ನೀಡಲು ಇಲಾಖೆ ಮುಂದಾಗಿದೆ. ಅಕ್ಟೋಬರ್ ಅಂತ್ಯಕ್ಕೆ ಸ್ಕೂಬಾ ಡೈವಿಂಗ್ ಆರಂಭವಾಗುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಮೊದಲಿಗೆ ಕಾಪು ಕಡಲ ಕಿನಾರೆಯಲ್ಲೇ ಆರಂಭವಾಗಲಿದೆ. 
- ಅನಿತಾ ( ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಟೂರಿಸಂ ಉಡುಪಿ ಜಿಲ್ಲೆ ) 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News