ದೇಶದ ಎಲ್ಲಾ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ‘ಸೌಭಾಗ್ಯ ಯೋಜನೆ’ಗೆ ಪ್ರಧಾನಿ ಚಾಲನೆ

Update: 2017-09-25 15:17 GMT

ಹೊಸದಿಲ್ಲಿ, ಸೆ.25: ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿರುವ ಬಡವರಿಗೆ ಉಚಿತ ವಿದ್ಯುತ್ ಸಂಪರ್ಕ ನೀಡುವ 16,320 ಕೋಟಿ ರೂ. ಮೊತ್ತದ ‘ಸೌಭಾಗ್ಯ ಯೋಜನೆ’ಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ.

16 ಸಾವಿರ ಕೋಟಿ ರೂ.ಗಳ ಈ ಯೋಜನೆಯ ಮೊತ್ತವನ್ನು ಕೇಂದ್ರ ಸರಕಾರ ಭರಿಸಲಿದೆ. “ಹೊಸ ಭಾರತದಲ್ಲಿ ಎಲ್ಲಾ ಗ್ರಾಮಗಳಲ್ಲಿ ಮಾತ್ರವಲ್ಲ, ಎಲ್ಲಾ ಮನೆಗಳಲ್ಲೂ ವಿದ್ಯುತ್ ಸಂಪರ್ಕ ಇರಲಿದೆ. ವಿದ್ಯುತ್ ಸಂಪರ್ಕಕ್ಕಾಗಿ ಯಾವ ಬಡವನೂ ಹಣ ತೆರಬೇಕಾಗಿಲ್ಲ. ವಿದ್ಯುತ್ ಸಂಪರ್ಕಕ್ಕಾಗಿ ಈ ಹಿಂದೆ ಜನರು ಕಚೇರಿಗಳಿಗೆ ಅಲೆದಾಡುತ್ತಿದ್ದರು, ಆದರೆ ಇಂದು ಸರಕಾರವೇ ಅವರ ಮನೆಗೆ ತೆರಳಲಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೇಶದಲ್ಲಿ 4 ಕೋಟಿ ಮನೆಗಳಲ್ಲಿ ಇಂದಿಗೂ ವಿದ್ಯುತ್ ಸಂಪರ್ಕವಿಲ್ಲ. “25 ಶೇ, ಜನರಿಗೆ ವಿದ್ಯುತ್ ಸಂಪರ್ಕವಿಲ್ಲ. ಅವರಿನ್ನೂ 18ನೆ ಶತಮಾನದಲ್ಲೇ ಬದುಕುತ್ತಿದ್ದಾರೆ” ಎಂದು ಇದೇ ಸಂದರ್ಭ ಪ್ರಧಾನಿ ಹೇಳಿದರು. 2019ರ ಮಾರ್ಚ್ 31ರ ಒಳಗೆ ದೇಶದ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿರುವುದಾಗಿ ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News