ಕುಂಬ್ರ ಮರ್ಕಝ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿ ಮುಹಮ್ಮದ್ ಶುಕೂರ್
ಪುತ್ತೂರು,ಸೆ.25: ತಾಲೂಕಿನ ಕುಂಬ್ರದಲ್ಲಿ ಕಾರ್ಯಾಚರಿಸುತ್ತಿರುವ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರೀಯ ಸಮಿತಿಯ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶಕೂರ್ ಮಣಿಲ,ಪ್ರಧಾನ ಕಾರ್ಯದರ್ಶಿಯಾಗಿ ನಝೀರ್ ಹಾಜಿ ಕೆಮ್ಮಾರ ಆಯ್ಕೆಯಾಗಿದ್ದಾರೆ.
ಸಮಿತಿಯ ಮಹಾಸಭೆಯು ಇತ್ತೀಚಿಗೆ ಅಬುಧಾಬಿ ,ಮುಸಫ ಅಲ್ ಮಿದ್ ಹಾ ಸಭಾಂಗಣದಲ್ಲಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್ ಅವರ ಅಧ್ಯಕ್ಷ ತೆಯಲ್ಲಿ ನಡೆದು ಪದಾಕಾರಿಗಳನ್ನು ಆರಿಸಲಾಯಿತು.
ಗೌರವಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ, ಖಜಾಂಜಿಯಾಗಿ ಹಾಜಿ ಬಶೀರ್ ಬೊಳುವಾರು, ಉಪಾಧ್ಯಕ್ಷರುಗಳಾಗಿ ಅಬ್ದುಲ್ಲಾ ಮುಸ್ಲಿಯಾರ್ ಬೊಳ್ಮಾರ್, ಹಾಜಿ ಅಬ್ದುಲ್ಲಾ ನಲ್ಕ, ಹಾಜಿ ಅಬ್ದುಲ್ ರಝಾಖ್ ಮಣಿಲ,.ಹಾಜಿ ಅಬ್ದುಲ್ ರಝಾಖ್ ಜೆಲ್ಲಿ,ಮುಹಮ್ಮದ್ ಇಖ್ಬಾಲ್ ಕಾಜೂರು, ಇಬ್ರಾಹಿಂ ಬ್ರೈಟ್ ಮಾರ್ಬಲ್,ಸಂಘಟನಾ ಕಾರ್ಯದರ್ಶಿ :ಮುಹಮ್ಮದ್ ರಫೀಖ್ ಸಂಪ್ಯ,ನಿರ್ವಾಹಕ ಕಾರ್ಯದರ್ಶಿ ಉಮರ್‍ಕಾಣಿಯೂರ್, ಕಾರ್ಯದರ್ಶಿಗಳಾಗಿ ಮುಹಮ್ಮದ್ ಕಮಾಲ್ ಅಜ್ಜಾವರ,ಅಬ್ದುಲ್ ರಝಾಖ್ ಬುಸ್ತಾನಿ ಪರ್ಲಡ್ಕ,ಹಸನ್ ಕಂಬಳಬೆಟ್ಟು,ಶಾಫಿ ಸಖಾಫಿ ಕರಿಂಬಿಲ,ಸಲಹಾ ಮಂಡಳಿಯ ಅಧ್ಯಕ್ಷರಾಗಿ ಹಾಜಿ ಶೇಖ್ ಬಾವ ಮಂಗಳೂರು,ಸಲಹೆಗಾರರಾಗಿ ಪಿ.ಎಂ.ಎಚ್. ಅಬ್ದುಲ್ ಹಮೀದ್ ಈಶ್ವರಮಂಗಲ, ಹಾಜಿ ಮುಹಮ್ಮದ್ ಅಲೀ ವಳವೂರು ಆಯ್ಕೆಯಾದರು.
ಕೆಸಿಎಫ್ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಜಿ ಶೇಖ್ ಬಾವ ಉದ್ಘಾಟಿಸಿದರು. ಹಾಜಿ ಅಬ್ದುಲ್ಲಾ ಮುಸ್ಲಿಯಾರ್ ಬೊಳ್ಮಾರ್ ದುವಾ ನೆರವೇರಿಸಿದರು. ಶಕೂರ್ ಮಣಿಲ ಸ್ವಾಗತಿಸಿ ರಫೀಖ್ ಸಂಪ್ಯ ವಂದಿಸಿದರು.