×
Ad

ಗಾಂಜಾ ಮಾರಾಟ: ಆರೋಪಿ ಸೆರೆ

Update: 2017-09-25 21:30 IST

ಮಂಗಳೂರು, ಸೆ. 25: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಇಕೊನಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 7 ಸಾವಿರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಮಂಜೇಶ್ವರ ತೂಮಿನಾಡು ನಿವಾಸಿ ಶೇಖರ್ ಯಾನೆ ಕ್ಯಾಮು(32)ಬಂಧಿತ ಆರೋಪಿ.

 ಗಾಂಜಾ ಹೊಂದಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಲಪಾಡಿ ಗ್ರಾಮದ ತಚ್ಚಾಣಿ ಎಂಬಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ. ಈತನ ಬಳಿ ಇದ್ದ 10 ಪ್ಯಾಕೇಟ್‌ನಲ್ಲಿದ್ದ ಒಟ್ಟು 433 ಗ್ರಾಂ ತೂಕದ ಗಾಂಜಾ ಪತ್ತೆಯಾಗಿದೆ. ಗಾಂಜಾ ಮಾರಾಟ ಮಾಡಿದ ರೂ.700 ನಗದು ಮತ್ತು ಒಂದು ಮೊಬೈಲ್‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

 ಆರೋಪಿ ಶೇಖರ್‌ನಿಗೆ ತೂಮಿನಾಡು ನಿವಾಸಿ ಆಸಿಫ್ ಎಂಬಾತ ಒಟ್ಟು 11 ಪ್ಯಾಕೆಟ್ ಗಾಂಜಾ ಮಾರಾಟ ಮಾಡಲು ನೀಡಿದ್ದ. ಅದರಲ್ಲಿ ಒಂದು ಪ್ಯಾಕೇಟ್ ಮಾರಾಟವಾಗಿದೆ ಎಂದು ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಇಕೊನಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಮುಹಮ್ಮದ್ ಶರ್ೀ, ಸಿಬ್ಬಂದಿಗಳಾದ ಶಾಜು ನಾಯರ್, ಲಕ್ಷ್ಮೀಶ, ಕಿಶೋರ್ ಪೂಜಾರಿ ಹಾಗೂ ಚಾಲಕ ಭಾಸ್ಕರ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News