×
Ad

ಗಿಫ್ಟ್ ಸ್ಕೀಮ್ ಹೆಸರಿನಲ್ಲಿ ಮೋಸ: ದೂರು

Update: 2017-09-25 21:35 IST

ಬ್ರಹ್ಮಾವರ, ಸೆ.25: ಗಿಫ್ಟ್ ಸ್ಕೀಮ್‌ನ ಹೆಸರಿನಲ್ಲಿ ಮೂವರು ಹಲವು ಮಂದಿಗೆ ಮೋಸ ಮಾಡಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಂಗನಕೆರೆಯ ಹಸನ್, ಇಬ್ರಾಹಿಂ ಹಾಗೂ ಕಾರ್ಕಡದ ಸಿರಾಜ್ ಎಂಬ ವರು ‘ನ್ಯೂ ಸ್ಟಾರ್ ಗಿಫ್ಟ್ ಸ್ಕೀಂ’ ಬಂರ್ ಬಹುಮಾನ ಎಂಬ ಹೆಸರಿನಲ್ಲಿ ಇಲೆಕ್ಟ್ರಾನಿಕ್ ಮತ್ತು ಗೃಹಪಯೋಗಿ ವಸ್ತುಗಳನ್ನು ಕಂತಿನ ಮೂಲಕ ನೀಡುವು ದಾಗಿ ತಿಳಿಸಿದಂತೆ 2015ರಲ್ಲಿ ಕೊಕ್ಕರ್ಣೆಯ ಪೆಜಮಂಗೂರಿನ ಪಲ್ಲವಿ(33) ಎಂಬವರು ತನ್ನ ಊರಿನ ಸುಮಾರು 110 ಮಂದಿಯನ್ನು ಸದಸ್ಯರನ್ನಾಗಿ ಮಾಡಿದ್ದರು.

 ಪ್ರತಿವಾರ ಒಬ್ಬರಿಂದ 30 ರೂ.ನಂತೆ ಒಟ್ಟು 3,300ರೂ. ಹಣ ಸಂಗ್ರಹಿಸಿ ಹಸನ್, ಇಬ್ರಾಹಿಂ ಹಾಗೂ ಸಿರಾಜ್ ಅವರಿಗೆ ನೀಡುತ್ತಿದ್ದರು. ಹೀಗೆ ಒಟ್ಟು 3,65,200ರೂ. ಹಣವನ್ನು ಸಂಗ್ರಹಿಸಿ ನೀಡಿದ್ದರು. ಸ್ಕೀಮ್ ಹತ್ತುವರೆ ತಿಂಗಳ ಅವಧಿಯದ್ದಾಗಿದ್ದು, ಪ್ರತಿವಾರ ಡ್ರಾ ಮಾಡಲಾಗುತ್ತಿತ್ತು. ಸ್ಕೀಮ್ ನಿಯಮ ದಂತೆ ಸ್ಕೀಮ್ ಮುಗಿದ ನಂತರ ಕೆಲವು ಸ್ಕೀಮ್ ಸದಸ್ಯರಿಗೆ ವಸ್ತುಗಳನ್ನು ಕೊಡದೇ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News