×
Ad

ಮದುವೆಯಾಗುವುದಾಗಿ ಯುವತಿಗೆ ವಂಚನೆ: ಆರೋಪಿಯ ಸೆರೆ

Update: 2017-09-25 21:42 IST

ಮಂಗಳೂರು, ಸೆ. 25: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ವಂಚನೆ ಮಾಡಿದ್ದ ಆರೋಪದಲ್ಲಿ ಯುವಕನೋರ್ವನನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಸೋಮವಾರ ಪಡೀಲ್ ಎಂಬಲ್ಲಿ ಬಂಧಿಸಿದ್ದಾರೆ.

 ಪುತ್ತೂರು ಗೋಳಿತೊಟ್ಟು ಜನತಾಕಾಲನಿ ನಿವಾಸಿ ರಾಜೇಶ್ ಕುಮಾರ್ (22) ಬಂಧಿತ ಆರೋಪಿ.

 ಈತ ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, 2 ವರ್ಷದ ಹಿಂದೆ ಪರಿಚಯವಾದ ಯುವತಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಬೆದರಿಸಿ ಅತ್ಯಾಚಾರ ಮಾಡಿದ್ದ. ಇದಾದ ಕೆಲವು ಸಮಯದ ನಂತರ ಯುವತಿಯನ್ನು ದೂರ ಮಾಡಿ ಮದುವೆಗೆ ನಿರಾಕರಿಸಿ ವಂಚನೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು.

ಯುವತಿ ನೀಡಿದ ದೂರಿನಂತೆ ಯುವಕನ ವಿರುದ್ಧ ಅತ್ಯಾಚಾರ, ವಂಚನೆ, ಬೆದರಿಕೆ ಪ್ರಕರಣಗಳನ್ನು ದಾಖಲಿಸಿಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News