ರೊಹಿಂಗ್ಯಾರಿಗೆ ಅಗಾಧ ನೆರವು ಬೇಕು: ವಿಶ್ವಸಂಸ್ಥೆ

Update: 2017-09-25 16:31 GMT

ಕಾಕ್ಸ್ ಬಝಾರ್ (ಬಾಂಗ್ಲಾದೇಶ), ಸೆ. 25: ಮ್ಯಾನ್ಮಾರ್‌ನಲ್ಲಿ ಸೇನೆ ನಡೆಸುತ್ತಿರುವ ದಮನ ಕಾರ್ಯಾಚರಣೆಗೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ಸುಮಾರು 4.36 ಲಕ್ಷ ರೊಹಿಂಗ್ಯಾ ನಿರಾಶ್ರಿತರಿಗೆ ಆಹಾರ ಮತ್ತು ಆಶ್ರಯ ನೀಡಲು ‘ಬೃಹತ್ ಅಂತಾರಾಷ್ಟ್ರೀಯ ನೆರವಿ’ನ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನರ್ ಫಿಲಿಪೊ ಗ್ರಾಂಡಿ ರವಿವಾರ ಹೇಳಿದ್ದಾರೆ.

ದಕ್ಷಿಣ ಬಾಂಗ್ಲಾದೇಶದ ಕಾಕ್ಸ್ ಬಝಾರ್‌ನ ಸುತ್ತಮುತ್ತ ತುಂಬಿತುಳುಕುತ್ತಿರುವ ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿದ ಅವರು, ಇಲ್ಲಿ ಅಗಾಧ ಸವಾಲುಗಳಿವೆ ಎಂದರು.

‘‘ಅವರ ಅಗತ್ಯಗಳ ಅಗಾಧ ಪರಿಮಾಣವನ್ನು ಕಂಡು ನಾನು ಆಘಾತಗೊಂಡಿದ್ದೇನೆ. ಅವರಿಗೆ ಎಲ್ಲವೂ ಬೇಕು. ಅವರಿಗೆ ಆಹಾರ ಬೇಕು, ಅವರಿಗೆ ಶುದ್ಧ ನೀರು ಬೇಕು, ಅವರಿಗೆ ಆಶ್ರಯ ಬೇಕು, ಅವರಿಗೆ ಸರಿಯಾದ ಆರೋಗ್ಯ ರಕ್ಷಣೆ ಬೇಕು’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ಸ್ಥಳೀಯರು ಅಗಾಧ ಪ್ರಮಾಣದಲ್ಲಿ ಔದಾರ್ಯ ತೋರಿಸಿದ್ದಾರೆ, ಆದರೆ, ಅವರಿಗೆ ಈಗ ಅಗಾಧ ಅಂತಾರಾಷ್ಟ್ರೀಯ ನೆರವಿನ ಬೆಂಬಲ ಬೇಕಾಗಿದೆ ಎಂದು ಗ್ರಾಂಡಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News