×
Ad

ಮಧುಶ್ರೀ ಪ್ರಕಾಶನದ ತ್ರಿಂಶತಿ ಸಂಭ್ರಮ ಉದ್ಘಾಟನೆ

Update: 2017-09-25 22:24 IST

ಉಡುಪಿ, ಸೆ.25: ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಕಿದಿ ಯೂರು ಮಧುಶ್ರೀ ಪ್ರಕಾಶನದ ತ್ರಿಂಶತಿ ಸಂಭ್ರಮದ ಉದ್ಘಾಟನೆಯನ್ನು ಪರ್ಯಾಯ ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೋಮವಾರ ರಾಜಾಂಗಣದಲ್ಲಿ ನೆರವೇರಿಸಿದರು.

ಬಳಿಕ ಅವರು ‘ಮಧುಶ್ರೀ ಕಲಾವಿದರು’ ಉಡುಪಿ ನೂತನ ಕಲಾತಂಡಕ್ಕೆ ಲಾಂಛನ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿ, ಗಂಗಾಧರ ಕಿದಿ ಯೂರು ಅವರ ‘ಇಲ್ಲಡ್ ಒಂಜಿ ಯೋಧ’ ನಾಟಕ ಕೃತಿಯನ್ನು ಬಿಡುಗಡೆ ಗೊಳಿಸಿದರು. ಮರೆಯಾಗುತ್ತಿರುವ ತುಳು ಭಾಷೆಯ ಮೇಲಿನ ಅಭಿಮಾನ ವನ್ನು ನಾಟಕಗಳು ಬೆಳೆಸುವ ಕೆಲಸ ಮಾಡುತ್ತಿವೆ ಎಂದು ಸ್ವಾಮೀಜಿ ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ವಿದ್ವಾಂಸರಾದ ಡಾ.ಪಾದೆಕಲ್ಲು ವಿಷ್ಣು ಭಟ್, ಡಾ.ಪದ್ಮನಾಭ ಕೇಕುಣ್ಣಾಯ, ನವಯುಗ ಪ್ರೆಸ್‌ನ ಪ್ರಶಾಂತ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನ ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯ ಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ತುಳುಕೂಟದ ಗೌರವಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್, ಬೆಳ್ಮಣ್ ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ಚಂದ್ರ, ಅಖಿಲ ಭಾರತ ತುಳು ಒಕ್ಕೂಟದ ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.

ಮಧುಶ್ರೀ ಪ್ರಕಾಶನದ ಗಂಗಾಧರ ಕಿದಿಯೂರು ಸ್ವಾಗತಿಸಿದರು. ಚೈತನ್ಯ ಎಂ.ಜಿ. ವಂದಿಸಿದರು. ಜಿ.ಪಿ.ಪ್ರಭಾಕರ ತುಮರಿ ಕಾರ್ಯಕ್ರಮ ನಿರೂಪಿಸಿ ದರು. ಬಳಿಕ ‘ಬಗ್ಗನ ಭಾಗ್ಯೋ’ ತುಳು ನಾಟಕ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News