ಸಂಸ್ಕೃತದಿಂದ ಕನ್ನಡ ಸಾಹಿತ್ಯ ಪರಿಪೂರ್ಣ: ಪುತ್ತಿಗೆ ಸ್ವಾಮೀಜಿ

Update: 2017-09-25 16:55 GMT

ಉಡುಪಿ, ಸೆ.25: ಸಂಸ್ಕೃತದ ಹಿನ್ನೆಲೆ ಇಲ್ಲದೆ ಕನ್ನಡ ಸಾಹಿತ್ಯ ಪರಿಪೂರ್ಣ ಆಗಲು ಸಾಧ್ಯವಿಲ್ಲ ಎಂದು ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಮಿನಿ ಹಾಲ್‌ನಲ್ಲಿ ಸೋಮವಾರ ವೇದ, ಸಂಸ್ಕೃತ, ಕನ್ನಡ ಹಾಗೂ ಸಂಗೀತ ವಿದ್ವಾಂಸ ಪ್ರೊ.ರಾಜಗೋಪಾಲಾಚಾರ್ಯರ ಕುರಿತು ಕಾಲೇಜಿನ ಉಪನ್ಯಾಸಕ ಡಾ.ಶ್ರೀಕಾಂತ್ ಸಿದ್ಧಾಪುರ ಬರೆದ ‘ಸಾಮ ಗಾನ’ ಕೃತಿಯನ್ನು ಸೋಮವಾರ ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.

ಅಭಿಜಾತ ವಿದ್ವಾಂಸರಾಗಿದ್ದ ರಾಜಗೋಪಾಲಾಚಾರ್ಯ ಸಂಸ್ಕೃತ ಪಾಂಡಿತ್ಯ ದ ಮೂಲಕ ನಿಜವಾದ ವಿದ್ವತ್ ಪಡೆದಿದ್ದರು. ಮುಗ್ಧತೆ, ಸರಳತೆಯ ಸಾಕಾರ ಮೂರ್ತಿಯಂತಿದ್ದ ಇವರದ್ದು ಪರಿಪೂರ್ಣ ವ್ಯಕ್ತಿತ್ವವಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲರಿಗೂ ಅರ್ಥವಾಗುವ ಒಂದೇ ಭಾಷೆ ಅಂದರೆ ಅದು ಸಂಗೀತ. ಪ್ರತಿಯೊಬ್ಬರ ಮನಸ್ಸನ್ನು ಆಕರ್ಷಿಸುವ ಶಕ್ತಿ ಸಂಗೀತಕ್ಕೆ ಇದೆ. ರಾಜಗೋಪಾಲ ಆಚಾರ್ಯರು ತಾನು ಸಂಪಾದಿಸಿದ ಕನ್ನಡವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಕನ್ನಡಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್, ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್, ಸೂರಾಲು ಪರಮೇಶ್ವರ ಭಟ್, ರಾಮದಾಸ್ ಆಚಾರ್ಯ, ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್ ಶೆಟ್ಟಿ, ಲೇಖಕ ಶ್ರೀಕಾಂತ್ ಸಿದ್ದಾಪುರ ಉಪಸ್ಥಿತರಿದ್ದರು.

ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಪಿ.ಭಟ್ ಸ್ವಾಗತಿಸಿದರು. ಉಪ ನ್ಯಾಸಕ ಅಶ್ವತ್ಥ್ ಭಾರಧ್ವಾಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News