×
Ad

ಕೊಂಕಣ ರೈಲ್ವೆ ಹಳಿ ದುರಸ್ತಿ 27ಕ್ಕೆ ರೈಲು ಸಂಚಾರ ವ್ಯತ್ಯಯ

Update: 2017-09-25 22:26 IST

ಉಡುಪಿ, ಸೆ.25: ಪಡೀಲ್ ಮತ್ತು ಜೋಕಟ್ಟೆ ನಡುವಿನ ಕೊಂಕಣ ರೈಲು ಹಳಿಗಳ ದುರಸ್ತಿ ಹಾಗೂ ಸಬ್‌ವೇಗಳಿಗೆ ಆರ್‌ಸಿಸಿ ಬ್ಲಾಕ್‌ಗಳನ್ನು ಅಳವಡಿಸುವ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಸೆ.27ರ ಬುಧವಾರ ಅಪರಾಹ್ನ 1:30ರಿಂದ ರಾತ್ರಿ 7:00ಗಂಟೆಯವರೆಗೆ ಒಟ್ಟು ಐದೂವರೆ ಗಂಟೆಗಳ ಕಾಲ ಕೆಲವು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಸೆ.27ರಂದು ರೈಲು ನಂ.12133/12134 ಮುಂಬಯಿ ಸಿಎಸ್‌ಎಂಟಿ- ಮಂಗಳೂರು ಜಂಕ್ಷನ್-ಮುಂಬಯಿ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ರೈಲು ಸುರತ್ಕಲ್‌ನಲ್ಲೇ ತನ್ನ ಪ್ರಯಾಣ ಕೊನೆಗೊಳಿಸಲಿದ್ದು, ಸುರತ್ಕಲ್- ಮಂಗಳೂರು ಜಂಕ್ಷನ್-ಸುರತ್ಕಲ್ ಸಂಚಾರ ರದ್ದಾಗಲಿದೆ.

ರೈಲು ನಂ.70105/70106 ಮಡಂಗಾವ್- ಮಂಗಳೂರು ಸೆಂಟ್ರಲ್- ಮಡಂಗಾವ್ ಪ್ಯಾಸೆಂಜರ್ (ಡೆಮೊ) ರೈಲಿನ ಸಂಚಾರವನ್ನು ತೋಕೂರು- ಮಂಗಳೂರು ಜಂಕ್ಷನ್- ತೋಕೂರು ಮಧ್ಯೆ ಭಾಗಶ: ರದ್ದಾಗಲಿದೆ.

ರೈಲು ನಂ.16515 ಯಶವಂತಪುರ-ಕಾರವಾರ ಏಕ್ಸ್‌ಪ್ರೆಸ್ ರೈಲು ತೋಕೂರಿಗೆ 50 ನಿಮಿಷ ತಡವಾಗಿ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News