ಸಾಮೂಹಿಕ ಸ್ಮಶಾನದಲ್ಲಿ 45 ಹಿಂದೂಗಳ ಶವ ಪತ್ತೆ: ಸೇನೆ

Update: 2017-09-25 17:19 GMT

ಯಾಂಗನ್ (ಮ್ಯಾನ್ಮಾರ್), ಸೆ. 25: ಮ್ಯಾನ್ಮಾರ್‌ನ ರಖೈನ್ ರಾಜ್ಯದ ಸಾಮೂಹಿಕ ಸ್ಮಶಾನವೊಂದರಿಂದ 28 ಹಿಂದೂಗಳ ದೇಹಗಳನ್ನು ಹೊರತೆಗೆಯಲಾಗಿದೆ ಎಂಬುದಾಗಿ ಮ್ಯಾನ್ಮಾರ್ ಸೇನೆ ಘೋಷಿಸಿದ ಒಂದು ದಿನದ ಬಳಿಕ, ಸಾಮೂಹಿಕ ಸ್ಮಶಾನಗಳಿಂದ ಇನ್ನೂ 17 ದೇಹಗಳನ್ನು ಸೋಮವಾರ ವಶಪಡಿಸಿಕೊಳ್ಳಲಾಗಿದೆ ಎಂದು ಸರಕಾರ ಹೇಳಿದೆ.

ಇದು ರೊಹಿಂಗ್ಯಾ ಮುಸ್ಲಿಮ್ ಉಗ್ರರು ನಡೆಸಿದ ಹತ್ಯಾಕಾಂಡಕ್ಕೆ ಪುರಾವೆಯಾಗಿದೆ ಎಂದು ಸೇನೆ ಆರೋಪಿಸಿದೆ.

ಉತ್ತರ ರಖೈನ್ ರಾಜ್ಯದ ಯೆ ಬಾವ್ ಕ್ಯಾವ್ ಗ್ರಾಮದ ಹೊರವಲಯದಲ್ಲಿ 28 ಹಿಂದೂಗಳ ದೇಹಗಳಿಂದ ತುಂಬಿದ್ದ ಎರಡು ಮಣ್ಣಿನ ಗುಂಡಿಗಳನ್ನು ಪತ್ತೆ ಹಚ್ಚಿರುವುದಾಗಿ ಸೇನೆ ರವಿವಾರ ಹೇಳಿತ್ತು.

ಇನ್ನೂ 17 ದೇಹಗಳು ಸೋಮವಾರ ಪತ್ತೆಯಾಗಿವೆ ಎಂದು ಸರಕಾರಿ ವಕ್ತಾರ ಝಾವ್ ಹಟಾಯ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News