ಮೆಕ್ಸಿಕೊ: ಭೂಕಂಪ ಸಂತ್ರಸ್ತರಿಗಾಗಿ ಚರ್ಚ್‌ಗಳಲ್ಲಿ ಪ್ರಾರ್ಥನೆ

Update: 2017-09-25 17:24 GMT

ಮೆಕ್ಸಿಕೊ ಸಿಟಿ, ಸೆ. 25: 32 ವರ್ಷಗಳ ಅವಧಿಯಲ್ಲಿ ಮೆಕ್ಸಿಕೊದಲ್ಲಿ ಸಂಭವಿಸಿದ ಅತ್ಯಂತ ವಿನಾಶಕಾರಿ ಭೂಕಂಪದಲ್ಲಿ ಮೃತಪಟ್ಟವರಿಗಾಗಿ ಪ್ರಾರ್ಥಿಸಲು ಮೆಕ್ಸಿಕನ್ನರು ರವಿವಾರ ಭಾರೀ ಸಂಖ್ಯೆಯಲ್ಲಿ ಚರ್ಚ್‌ಗಳಿಗೆ ಭೇಟಿ ನೀಡಿದರು.

ಈ ನಡುವೆ, ಮಂಗಳವಾರ ಮೆಕ್ಸಿಕೊ ಸಿಟಿ ಮತ್ತು ಸುತ್ತಲ ರಾಜ್ಯಗಳನ್ನು ನಡುಗಿಸಿದ 7.1ರ ತೀವ್ರತೆಯ ಭೂಕಂಪದಿಂದಾಗಿ ಅವಶೇಷಗಳಡಿ ಸಿಕ್ಕಿಕೊಂಡಿರುವ ಹಾಗೂ ಇನ್ನೂ ಬದುಕುಳಿದಿರಬಹುದಾದ ಜನರಿಗಾಗಿ ರಕ್ಷಣಾ ಕಾರ್ಯಕರ್ತರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

ಅದೇ ವೇಳೆ, ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 320ಕ್ಕೆ ಏರಿದೆ.

ಸಾವಿರಾರು ಕಟ್ಟಡಗಳು ಹಾನಿಗೀಡಾಗಿದ್ದು, ಜನರು ತಮ್ಮ ಮನೆಗಳ ಹೊರಗೆ ರಸ್ತೆಗಳಲ್ಲಿ ಮಲಗುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News