ಮುದ್ರಾಡಿ : ನವರಂಗೋತ್ಸವ

Update: 2017-09-25 17:33 GMT

ಹೆಬ್ರಿ,ಸೆ.25 : ಮುದ್ರಾಡಿ ನಾಟ್ಕದೂರು ನಮತುಳುವೆರ್ ಕಲಾ ಸಂಘಟನೆ ನಾಟ್ಕ ಮುದ್ರಾಡಿಯ 32ನೇ ವರ್ಷ ಸಂಭ್ರಮದಲ್ಲಿ 17ನೇ ವರ್ಷದ ನವರಂಗೋತ್ಸವ ನೀಡುವ ಕರ್ಣಾಟ ನಾಡ ಪೋಷಕ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ನಾಟ್ಕ ಮುದ್ರಾಡಿಯ ಅಧ್ಯಕ್ಷರಾದ ರಂಗ ನಟ ನಿರ್ದೇಶಕ ಸುಕುಮಾರ ಮೋಹನ್ ತಿಳಿಸಿದ್ದಾರೆ. 

ಕಾಸರಗೋಡಿನ ಡಾ.ರಾಜೇಶ್ ಆಳ್ವ ಬದಿಯಡ್ಕ (ಸಮಾಜಸೇವೆ), ಡಾ. ಶಿವಾನಂದ ರಾಥೋರ್( ವೈಧ್ಯಕೀಯ), ಪುರುಷೋತ್ತಮ್ ಚೆಂಡ್ಲಾ ಬೆಂಗಳೂರು, (ಸಾಹಿತ್ಯ, ಸಮಾಜಸೇವೆ), ದಿವಾಕರ ಶೆಟ್ಟಿ ಸಾಂಗ್ಲಿ ( ಸಮಾಜ ಸೇವೆ), ಮುನಿಯಾಲು ಉದಯ ಕುಮಾರ್ ಶೆಟ್ಟಿ(ಸಮಾಜಸೇವೆ),  ಡಾ.ಕಬ್ಬಿನಾಲೆ ವಸನ್ತ ಭಾರಧ್ವಾಜ್( ಸಾಹಿತ್ಯ), ಡಾ. ವಿಶ್ವನಾಥ ನಾಯಕ್ ಪಾಣೆ ಮಂಗಳೂರು( ವೈಧ್ಯಕೀಯ),  ಹಿರಿಯಡ್ಕ ಗೋಪಾಲ ರಾವ್,(ಯಕ್ಷಗಾನ), ರಾಮಾಂಜನೇಯ ಕಮ್ಮಾರ ಹೆಬ್ರಿ ( ಶಿಕ್ಷಣ) ಅವರಿಗೆ ಕರ್ಣಾಟ ನಾಡ ಪೋಷಕ ಪ್ರಶಸ್ತಿ ಮತ್ತು ಶಮಿನಾ ಆಳ್ವ ಮಂಗಳೂರು, (ಶಿಕ್ಷಣ,ಸಮಾಜಸೇವೆ), ಫಾತಿಮಾ ಹುಸೆನ್ ರಾಯಚೂರು( ರಾಜಕೀಯ) ಅವರಿಗೆ ಕರ್ಣಾಟ ನಾಡ ಪೋಷಕಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ಸೆಷ್ಟಂಬರ್ 30ರಂದು ಸಂಜೆ ರಾಜ್ಯದ ಕ್ರೀಡೆ, ಯುವ ಸಬಲೀಕರಣ ಮತ್ತು ಮೀನುಗಾರಿಕಾ ಸಚಿವರಾದ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ನಡೆಯುವ ನವರಂಗೋತ್ಸವದ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮಾಜಿ ಸಚಿವರಾದ ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ ಪೂಜಾರಿ, ಪತ್ರಕರ್ತ ರಾಯಚೂರಿನ ಮಾರುತಿ ಬಡಿಗೇರ್ ಉಪಸ್ಥಿತರಿರುವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News