ನಗರ ಹಸಿರೀಕರಣ ಅಭಿಯಾನ

Update: 2017-09-25 17:42 GMT

ಮಂಗಳೂರು, ಸೆ.25: ಯುಎಇ ಮೂಲದ ಖ್ಯಾತ ಜಾಗತಿಕ ಮರಮಟ್ಟು ಸಂಘಟಿತ ವ್ಯಾಪಾರ ಸಂಸ್ಥೆ ‘ಮೊಹಿಯುದ್ದೀನ್ ವುಡ್ ವರ್ಕ್ಸ್ ಕಂಪೆನಿ’ಯು ತನ್ನ ಸಾಮಾಜಿಕ ಉತ್ತರದಾಯಿತ್ವ ಕಾರ್ಯಕ್ರಮ (ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಪ್ರೋಗ್ರಾಂ)ದ ಅಂಗವಾಗಿ ‘ಮಂಗಳೂರು ಫ್ಲವರ್ ಸಿಟಿ ಫೌಂಡೇಶನ್’ ಎಂಬ ಸಮಾಜ ಸೇವಾ ಸಂಸ್ಥೆ ಹಮ್ಮಿಕೊಂಡಿರುವ ಹಸಿರು ನಗರ ಅಭಿಯಾನದಲ್ಲಿ ಕೈಜೋಡಿಸಿದೆ.

ಮಂಗಳೂರು ನಗರವನ್ನು ಸುಂದರಗೊಳಿಸುವ ಪ್ರಕ್ರಿಯೆಯ ಅಂಗವಾಗಿ ನಗರದೆಲ್ಲೆಡೆ ಸರಣಿ ಕಾರ್ಯಕ್ರಮದಲ್ಲಿ ವಿವಿಧ ಹೂಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಯಿದೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶವನ್ನು ಮಂಗಳೂರು ಸಿಟಿ ಫೌಂಡೇಶನ್ ಹೊಂದಿದೆ. ನಗರದೊಳಗೆ ಹಸಿರು ಪದರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಂದೋಲನವನ್ನು ರೂಪಿಸುವ ಗುರಿಯನ್ನು ಹೊಂದಿರುವ ಪ್ರತಿಷ್ಠಾನವು ನಗರದ ಪ್ರಮುಖ ರಸ್ತೆಯ ಬದಿಯಲ್ಲಿ ಹೂಗಿಡಗಳನ್ನು ನೆಡುವ ಕಾರ್ಯವನ್ನು ಈಗಾಗಲೇ ಆರಂಭಿಸಿದೆ. ಪ್ರಥಮ ಹಂತದಲ್ಲಿ ನಗರದ ಕೆಪಿಟಿ ವೃತ್ತದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 2,000 ಗಿಡಗಳನ್ನು ನೆಡುವ ಯೋಜನೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News