ಅಗತ್ಯವಾದರೆ ಮತ್ತೆ ಸರ್ಜಿಕಲ್ ದಾಳಿ: ಪಾಕಿಸ್ತಾನಕ್ಕೆ ಜ.ರಾವತ್ ಎಚ್ಚರಿಕೆ

Update: 2017-09-25 17:52 GMT

ಹೊಸದಿಲ್ಲಿ,ಸೆ.25: ಅಗತ್ಯ ಬಿದ್ದರೆ ಭಾರತವು ನಿಯಂತ್ರಣ ರೇಖೆಯಾಚೆ ಮತ್ತೆ ಸರ್ಜಿಕಲ್ ದಾಳಿಗಳನ್ನು ನಡೆಸಬಹುದು ಎಂದು ಭೂಸೇನೆ ವರಿಷ್ಠ ಜ.ಬಿಪಿನ್ ರಾವತ್ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

 ‘‘ಸರ್ಜಿಕಲ್ ದಾಳಿಗಳ ಮೂಲಕ ನಾವು ಸಂದೇಶವೊಂದನ್ನು ರವಾನಿಸಿದ್ದೆವು. ಎದುರಾಳಿಯು ತನ್ನ ವರ್ತನೆಯನ್ನು ತಿದ್ದಿಕೊಳ್ಳದಿದ್ದರೆ ಮತ್ತು ನಾವು ಇಂತಹ ಚಟುವಟಿಕೆಗಳನ್ನು ಮುಂದುವರಿಸುವುದು ಅಗತ್ಯವಾದರೆ ಅದಕ್ಕೆ ಇತರ ಮಾರ್ಗಗಳೂ ಇವೆ. ಹಿಂದಿನ ರೂಪದಲ್ಲಿಯೇ ನಾವು ದಾಳಿ ನಡೆಸಬೇಕು ಎಂದೇನಿಲ್ಲ ’’ ಎಂದು ಅವರು ಹೇಳಿದ್ದಾಗಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

‘‘ನಿಯಂತ್ರಣ ರೇಖೆಯಾಚೆ ಭಯೋತ್ಪಾದನೆ ಶಿಬಿರಗಳು ಈಗಲೂ ಅಸ್ತಿತ್ವದಲ್ಲಿವೆ ಯಾದ್ದರಿಂದ ಭಯೋತ್ಪಾದಕರು ಭಾರತದಲ್ಲಿ ನುಸುಳುವುದನ್ನು ಮುಂದುವರಿಸುತ್ತಾರೆ. ಅದಕ್ಕೂ ನಾವು ಸಿದ್ಧರಿದ್ದೇವೆ. ನಾವು ಅವರನ್ನು ಬರಮಾಡಿಕೊಳ್ಳುತ್ತೇವೆ ಮತ್ತು ಭೂಮಿಯಡಿ ಎರಡೂವರೆ ಅಡಿ ಆಳಕ್ಕೆ ಅವರನ್ನು ಕಳುಹಿಸುತ್ತೇವೆ ’’ ಎಂದು ‘ಇಂಡಿಯಾ ಮೋಸ್ಟ್ ಫಿಯರ್‌ಲೆಸ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಜರಾವತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News