ಉಡುಪಿ: ಸೆ.27ರಂದು ಪ್ರವಾಸೋದ್ಯಮ ದಿನಾಚರಣೆ

Update: 2017-09-25 17:53 GMT

ಉಡುಪಿ, ಸೆ.25: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಉಡುಪಿ, ಪ್ರವಾಸೋದ್ಯಮ ಮತ್ತು ಆತಿಥ್ಯ ಕೌಶಲ್ಯ ಕೇಂದ್ರ ಮಣಿಪಾಲ, ನಿರ್ಮಿತಿ ಕೇಂದ್ರ, ಮಲ್ಪೆಬೀಚ್ ಅಭಿವೃದ್ಧಿ ಸಮಿತಿ, ಕರಾವಳಿ ಪ್ರವಾಸೋದ್ಯಮಗಳ ಸಂಘಟನೆ(ಎಸಿಟಿ) ಇವರ ಸಂಯುಕ್ತ ಆಶ್ರಯದಲ್ಲಿ ‘ಸುಸ್ಥಿರ ಪ್ರವಾಸೋದ್ಯಮ -ಅಭಿವೃದ್ಧಿಯ ಒಂದು ಸಾಧನ’ ಸಂದೇಶದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಾಗೂ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ನವೀಕರಿಸಿದ ವೆಬ್‌ಸೈಟ್ ಅನಾವರಣ ಮತ್ತು ಉಡುಪಿ ಪ್ರವಾಸೋದ್ಯಮ ಆ್ಯಪ್(Udupi Tourism App) ಬಿಡುಗಡೆ ಸಮಾರಂಭ ಸೆ.27ರಂದು ಬೆಳಗ್ಗೆ 10:30ಕ್ಕೆ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿರುವರು ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News