ಮಲೆಯಾಳಿ ಕ್ರಿಶ್ಚಿಯನ್ ಎಸೋಸಿಯೇಶನ್‍ನ ಬೆಳ್ತಂಗಡಿ ಘಟಕದ ನೂತನ ಕಚೇರಿ ಉದ್ಘಾಟನೆ

Update: 2017-09-26 11:36 GMT

ಬೆಳ್ತಂಗಡಿ,ಸೆ.26: ಅಲ್ಪಸಂಖ್ಯಾತ ಸಮುದಾಯವಾಗಿರುವ ಕ್ರೈಸ್ಥ ಸಮುದಾಯ ಸಂಘಟಿತರಾದರೆ ಮಾತ್ರ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಎಂದು ಕಾರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಎಸೋಸೊಯೇಶನ್‍ನ ರಾಜ್ಯ ಅಧ್ಯಕ್ಷರಾದ ಎ.ಸಿ ಜಯರಾಜ್ ಹೇಳಿದರು. 

ಅವರು ಬೆಳ್ತಂಗಡಿಯಲ್ಲಿ ಮಂಗಳವಾರ ಮಲೆಯಾಳಿ ಕ್ರಿಶ್ಚಿಯನ್ ಎಸೋಸಿಯೇಶನ್‍ನ ಬೆಳ್ತಂಗಡಿ ಘಟಕದ ನೂತನ ಕಚೇರಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕೇರಳದಿಂದಿ ವಿವಿಧ ಸಂದರ್ಭಗಳಲ್ಲಿ ಕರ್ನಾಟಕದ ವಿವಿಧ ಪ್ರದೇಶಗಳಿಗೆ ವಲಸೆ ಬಂದ ಕ್ರೈಸ್ಥ ಸಮುದಾಯ ತನ್ನದೇ ಆದ ಆಚಾರವಿಚಾರಗಳನ್ನು ಉಳಿಸಿಕೊಂಡು ಈ ನಾಡಿನ ಸಂಸ್ಕೃತಿಯ ಭಾಗವಾಗಿಯೇ ಬೆಳೆದಿದ್ದಾರೆ. ಸಂಘಟನೆಯ ಕೊರತೆಯಿಂದಾಗಿ ಸಮುದಾಯ ಅವಕಾಶಗಳಿಂದ ವಂಚಿತರಾಗುತ್ತಿದ್ದು ಸಂಘಟನೆಯನ್ನು ಬಲಿಷ್ಟಗೊಳಿಸಿ ಸಮುದಾಯದ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದೇ ಇದರ ಗುರಿಯಾಗಿದೆ ಎಂದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಘಟನೆಯ ಶಿವಮೊಗ್ಗ ಜಿಲ್ಲಾಧ್ಯಕ್ಷ ಶೈನ್ ಜೋಸೆಫ್ ಮಾತನಾಡಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕ್ರೈಸ್ಥ ಸಮುದಾಯ ಚದುರಿ ಹೋಗಿದ್ದು ಎಲ್ಲರನ್ನೂ ಒಂದೇ ಸಂಘಟನೆಯ ಅಡಿಯಲ್ಲಿ ತರಬೇಕಾದ ಅಗತ್ಯವಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಅಜಯ್ ಎ.ಜೆ ವಹಿಸಿ ಸಂಘಟನೆಯ ಕಾರ್ಯಚಟುವಟಿಕೆಗಳಿಗೆ ಎಲ್ಲರ ಸಹಕಾರ ಕೋರಿದರು. ವೇದಿಕೆಯಲ್ಲಿ ಎನ್‍ಆರ್‍ಪುರ ತಾಲೂಕು ಘಟಕದ ಅಧ್ಯಕ್ಷ ಕ್ಸೇವಿಯರ್, ಜಿಲ್ಲಾ ಘಟಕದ ಉಪಾಧ್ಯಕ್ಷ ಎ.ಸಿ ಮ್ಯಾಥ್ಯೂ, ಯುವ ಘಟಕದ ತಾಲೂಕು ಅಧ್ಯಕ್ಷ ಅಜಯ್ ಧರ್ಮಸ್ಥಳ, ಪಿಸಿ ಜೋಸೆಫ್ ಎನ್.ಆರ್‍ಪುರ ಹಾಗೂ ಇತರರು ಉಪಸ್ಥಿತರಿದ್ದರು.
ಶಿಬಿ ಧರ್ಮಸ್ಥಳ ಸ್ವಾಗತಿಸಿದರು. ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News