ಇಂಧನ ಬೆಲೆಯೇರಿಕೆಯ ಜನಾಕ್ರೋಶವನ್ನು ರಾಜ್ಯ ಸರಕಾರದ ಮೇಲೆ ಹೊರಿಸುವ ಬಿಜೆಪಿಯ ಹೇಳಿಕೆ ಹಾಸ್ಯಾಸ್ಪದ : ಡಿವೈಎಫ್ ಐ
Update: 2017-09-26 19:00 IST
ಮಂಜೇಶ್ವರ,ಸೆ.26 : ಇಂಧನ ಬೆಲೆಯೇರಿಕೆಯ ಜನರೋಷವನ್ನು ರಾಜ್ಯ ಸರಕಾರದ ಮೇಲೆ ಹೊರಿಸುವ ಬಿ.ಜೆ.ಪಿ ಯ ಪತ್ರಿಕಾ ಹೇಳಿಕೆ ಹಾಸ್ಯಾಸ್ಪದ ಎಂದು ಡಿ.ವೈ.ಎಫ್.ಐ ಮಂಜೇಶ್ವರ ಬ್ಲಾಕ್ ಸಮಿತಿ ಹೇಳಿದೆ. ಮೋದಿ ಸರಕಾರ ಆಡಳಿತಕ್ಕೆ ಬಂದ ಬಳಿಕ 16 ಬಾರಿ ಸೆಂಟ್ರಲ್ ಎಕ್ಸೈಸ್ ಡ್ಯೂಟಿಯನ್ನು ಹೆಚ್ಚಿಸಿದ್ದು ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್ ಬ್ಯಾರೆಲ್ ಬೆಲೆಯಲ್ಲಿ ಕಡಿಮೆಯಾದರು ದೇಶದಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗುತ್ತಿಲ್ಲ. ದಿನ ದಿನ ಹೆಚ್ಚಾಗುತ್ತಿದೆ. ಇದರಿಂದಾಗಿ ಕೇಂದ್ರಕ್ಕೆ 1 ಲಕ್ಷ ಕೋಟಿ ಅಧಿಕ ವರಮಾನ ಲಭಿಸಿದೆ. ಆದರೆ ಕೇರಳ ಸರಕಾರವು ಯಾವುದೇ ತೆರಿಗೆಯನ್ನು ಹೆಚ್ಚಿಸಿಲ್ಲ , ಕೇಂದ್ರ ಸರಕಾರದ ಪೆಟ್ರೋಲ್ ಬೆಲೆಯೇರಿಕೆಯಿಂದ ಜನ ಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಸರಕಾರದ ಪರಾಭವವನ್ನು ಮರೆಮಾಚಲು ರಾಜ್ಯ ಸರಕಾರದ ವಿರುದ್ಧ ಪತ್ರಿಕಾ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ಡಿ.ವೈ.ಎಫ್.ಐ ಮಂಜೇಶ್ವರ ಬ್ಲಾಕ್ ಸಮಿತಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.